ಅಕ್ರಮವಾಗಿ ಅಮೆರಿಕಾ ಗಡಿ ಪ್ರವೇಶಿಸುತ್ತಿದ್ದ 8 ಭಾರತೀಯರು ನದಿಯಲ್ಲಿ ಮುಳುಗಿ ಸಾವು

ಕೆನಡಾದಿಂದ ಅಮೆರಿಕಾ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ 8 ಭಾರತೀಯರು ಮೃತಪಟ್ಟಿದ್ದಾರೆ.

ಕೆನಡಾದ ಪೊಲೀಸರ ಕಾರ್ಯಾಚರಣೆಯಲ್ಲಿ ಎಂಟು ಮೃತ ದೇಹಗಳನ್ನು ಪತ್ತೆಹಚ್ಚಿದ್ದು ಅವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ರಾಯಿಟರ್ಸ್ ಪ್ರಕಾರ, ಕೆನಡಾದಿಂದ ಯುಎಸ್‌ಗೆ ದೋಣಿಯಲ್ಲಿ ಸೇಂಟ್ ಲಾರೆನ್ಸ್ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಭಾರತೀಯ ಕುಟುಂಬದ ಸದಸ್ಯರು ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ.

ಅಕ್ವೆಸಾಸ್ನೆ ಮೊಹಾವ್ಕ್ ಪೊಲೀಸ್ ಸೇವೆಯ ಮುಖ್ಯಸ್ಥ ಶಾನ್ ಡುಲುಡ್ ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿ ಕೆನಡಾ ಮತ್ತು ಅಮೆರಿಕ ನಡುವಿನ ಗಡಿಯಾಗಿ ಕಾರ್ಯನಿರ್ವಹಿಸುವ ಸೇಂಟ್ ಲಾರೆನ್ಸ್ ನದಿಯಲ್ಲಿ ಮೃತದೇಹಗಳು ಗುರುವಾರ ಪತ್ತೆಯಾಗಿವೆ ಎಂದರು.

ಬಿಬಿಸಿ ಪ್ರಕಾರ, ಭಾರತ ಮತ್ತು ರೊಮೇನಿಯಾದ ಎರಡು ಕುಟುಂಬಗಳು ಸತ್ತವರಲ್ಲಿ ಸೇರಿದ್ದಾರೆ. ಗುರುವಾರ ಪೊಲೀಸರಿಗೆ ಆರು ಮೃತ ದೇಹಗಳು ಪತ್ತೆಯಾಗಿದ್ದು, ಬುಧವಾರ ರಾತ್ರಿ ಈ ದುರಂತ ಸಂಭವಿಸಿರಬಹುದು ಎಂದು ಅವರು ಭಾವಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read