ಶೇಕಡ 7ಕ್ಕಿಂತಲೂ ಹೆಚ್ಚಾಗಲಿದೆ ಜಿಡಿಪಿ: NCAER ಮಾಹಿತಿ

ನವದೆಹಲಿ: ಭಾರತದ ಆರ್ಥಿಕತೆಯ ಬೆಳವಣಿಗೆ ಶೇಕಡ 7ಕ್ಕಿಂತಲೂ ಹೆಚ್ಚಾಗಬಹುದು ಎಂದು ಎನ್‌ಸಿಎಇಆರ್ ತಿಳಿಸಿದೆ.

ಸಾಮಾನ್ಯ ಮುಂಗಾರು ಅನಿಶ್ಚಿತತೆ ಮುಕ್ತಾಯವಾಗಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಹಿಂದೆ ಉಂಟಾಗಿದ್ದ ಗೊಂದಲ ಕೂಡ ತಿಳಿಯಾಗಿದೆ. ಇದರ ಪರಿಣಾಮ ಜಿಡಿಪಿ ಬೆಳವಣಿಗೆ ಶೇಕಡ 7ಕ್ಕಿಂತಲೂ ಹೆಚ್ಚಾಗಬಹುದು. 2024 -25 ನೇ ಸಾಲಿನಲ್ಲಿ ಜಿಡಿಪಿ ದರ ಶೇಕಡ 7.5 ತಲುಪುವ ಸಂಭವ ಇದೆ ಎಂದು ಎನ್‌ಸಿಎಇಆರ್ ತಿಳಿಸಿದೆ.

ಮಾಸಿಕ ಆರ್ಥಿಕ ಪರಾಮರ್ಶೆ ಜುಲೈ 2024ರ ಸಂಚಿಕೆಯಲ್ಲಿ 2023- 24ನೇ ಆರ್ಥಿಕ ವರ್ಷದಲ್ಲಿ ಸ್ಥಿರವಾಗಿದ್ದ ಅನುಭೋಗದ ಬೇಡಿಕೆ, ಹೂಡಿಕೆಯಲ್ಲಿ ಉಂಟಾಗಿರುವ ಚೇತರಿಕೆಯಿಂದ ಜೆಡಿಪಿ ಶೇಕಡ 8.2ಕ್ಕೆ ಏರಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಇರುವ ಮುಂಗಾರು ಮಾರುತ, ಭಾರತ ಮತ್ತು ಬೇರೆ ದೇಶಗಳಲ್ಲಿ ಚುನಾವಣೆ ಫಲಿತಾಂಶದ ಅನಿಶ್ಚಿತತೆಗೆ ಕೊನೆಯಾದ ಸಂಗತಿಗಳಿಂದ 2024 -25 ನೇ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಡಿಪಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read