Viral Video: ಭಾರತದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೀನಾ ಯುವತಿ; ಇಲ್ಲಿದೆ ಅವರ ಲವ್‌ ಸ್ಟೋರಿ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಎಂಬಿಎ ಓದುತ್ತಿರುವಾಗ ಭಾರತೀಯ ಹುಡುಗನೊಬ್ಬ ಚೀನಾದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಿದ್ದಾರೆ.

ಅವರು ಆಗಾಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪ್ರೇಮ ಜೀವನದ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ, ಅದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸ್ಯಾಂಡಿ ಎಂಬ ಹುಡುಗಿ ಚೀನಾದ ರಾಜಧಾನಿ ಬೀಜಿಂಗ್ ನಿವಾಸಿ. ಯುವಕ ಅವಿ ಭಾರತದ ಹರಿಯಾಣ ನಿವಾಸಿ. ಪ್ರಸ್ತುತ, ಇಬ್ಬರೂ ಜರ್ಮನಿಯಲ್ಲಿ ನೆಲೆಸಿದ್ದಾರೆ. ಇತ್ತೀಚೆಗಿನ ಯೂಟ್ಯೂಬ್ ವಿಡಿಯೋದಲ್ಲಿ ದಂಪತಿ ತಮ್ಮ ಪ್ರೇಮಕಥೆಯ ಬಗ್ಗೆ ತೆರೆದಿಟ್ಟಿದ್ದಾರೆ.

ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಅವಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದು ಮತ್ತು ಸುಮಾರು ಎರಡು ವರ್ಷಗಳ ಕಾಲ ನೋಯ್ಡಾದಲ್ಲಿ ಕೆಲಸ ಮಾಡಿದರು. ನಂತರ, ಎಂಬಿಎ ಪದವಿ ಪಡೆಯಲು ಪ್ಯಾರಿಸ್‌ಗೆ ತೆರಳಿದರು. ಸ್ಯಾಂಡಿ ತನ್ನ ಮುಂದಿನ ಅಧ್ಯಯನವನ್ನು ಫ್ರೆಂಚ್ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ನಿರ್ಧರಿಸಿದಳು. ಇಬ್ಬರೂ ಒಂದೇ ವಿಶ್ವವಿದ್ಯಾಲಯದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.

ಸ್ಯಾಂಡಿ ತನ್ನ ಶಾಲಾ ಶಿಕ್ಷಣವನ್ನು ಬೀಜಿಂಗ್‌ನಲ್ಲಿ ಪೂರ್ಣಗೊಳಿಸಿದರೆ, ಅವಿ ತನ್ನ ಶಾಲಾ ಶಿಕ್ಷಣವನ್ನು ಹರಿಯಾಣದಲ್ಲಿ ಮುಗಿಸಿದ್ದರು. ವೈರಲ್ ವಿಡಿಯೋದಲ್ಲಿ, ಇಬ್ಬರೂ ಆಗಸ್ಟ್ 2011 ರಲ್ಲಿ ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು ಎಂದು ಹೇಳಿದ್ದಾರೆ. ನಂತರ ಅವರ ನಡುವೆ ಪ್ರೀತಿ ಹೇಗೆ ಚಿಗುರಿತು. ಇಬ್ಬರೂ ಪರಸ್ಪರ ಪ್ರೀತಿಸುವ ವಿಷಯ ತಿಳಿಸಿದ ಬಗ್ಗೆ ಹೇಳಿಕೊಂಡಿದ್ದುಮ ಈಗ ದಾಂಪತ್ಯಕ್ಕೆ ಅಡಿ ಇಟ್ಟಿರುವುದಾಗಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read