ಉದ್ಯೋಗಿ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಲೂಲು ಗ್ರೂಪ್‌ ಅಧ್ಯಕ್ಷ; ಬಿಲಿಯನೇರ್‌ ಮಾನವೀಯ ನಡೆಗೆ ನೆಟ್ಟಿಗರು ಫಿದಾ | Watch

ಭಾರತೀಯ ಬಿಲಿಯನೇರ್ ಎಂ.ಎ. ಯೂಸುಫ್ ಅಲಿಯವರ ಮಾನವೀಯ ನಡವಳಿಕೆಯು ಜಗತ್ತಿನ ಗಮನ ಸೆಳೆದಿದೆ. ಅಬುಧಾಬಿಯಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಉದ್ಯೋಗಿ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಯನ್ನು ಲೂಲು ಗ್ರೂಪ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಅಲಿಯವರು ಹೊತ್ತಿದ್ದಾರಲ್ಲದೇ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಂತಾಪ ಸೂಚಿಸಿದ್ದಾರೆ. ತಿರೂರು ಕನನಾಂನವರಾದ ಶಿಹಾಬುದ್ದೀನ್ ಅವರು ಅಬುಧಾಬಿ ಅಲ್ ವಾಹ್ದಾ ಮಾಲ್‌ನ ಲೂಲು ಹೈಪರ್‌ಮಾರ್ಕೆಟ್‌ನಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲಿಯವರು ಈ ಶೋಕ ಸಮಾರಂಭದ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಹೃದಯಸ್ಪರ್ಶಿ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲಿಯವರ ಮಾನವೀಯತೆ ಮತ್ತು ತಮ್ಮ ಉದ್ಯೋಗಿಯ ಮೇಲಿನ ಗೌರವವನ್ನು ಅನೇಕ ಆನ್‌ಲೈನ್ ಬಳಕೆದಾರರು ಶ್ಲಾಘಿಸಿದ್ದಾರೆ. “ಬಾಸ್ ಹೀಗಿರಬೇಕು – ಹ್ಯಾಟ್ಸ್ ಆಫ್!” ಮತ್ತು “ಇದು ಮಾನವೀಯತೆ” ಎಂಬಂತಹ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read