ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತು ನಿಖರ ಭವಿಷ್ಯ; ಭಾರತೀಯ ಜ್ಯೋತಿಷಿಯ ಪೋಸ್ಟ್ ವೈರಲ್…!

ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗಿದ್ದ ಮೀಸಲಾತಿಯನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಹೋರಾಟ ಈಗ ಹಿಂಸಾರೂಪ ತಳೆದಿದ್ದು, ಪ್ರಧಾನಿಯಾಗಿದ್ದ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೀವ ಭಯದಿಂದ ದೇಶ ತೊರೆದಿದ್ದಾರೆ. ಇದರ ಮಧ್ಯೆ 2023ರಲ್ಲಿ ಶೇಖ್ ಹಸೀನಾ ಅವರ ಕುರಿತಂತೆ ಭಾರತೀಯ ಜ್ಯೋತಿಷಿ ಹೇಳಿದ್ದ ಭವಿಷ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 2023ರ ಡಿಸೆಂಬರ್ 14ರಂದು ಪೋಸ್ಟ್ ಒಂದನ್ನು ಹಾಕಿದ್ದ ಭಾರತೀಯ ಜ್ಯೋತಿಷಿ ಪ್ರಶಾಂತ್ ಕಿಣಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಕುರಿತು ನನ್ನ ಭವಿಷ್ಯ ಏನೆಂದರೆ, ಅವರು ತುಂಬಾ ಎಚ್ಚರದಿಂದ ಇರಬೇಕು. 2024ರ ಮೇ, ಜೂನ್, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಅವರ ಹತ್ಯಾ ಪ್ರಯತ್ನಗಳು ನಡೆಯಬಹುದು ಎಂದು ಹೇಳಿದ್ದರು. ಇದು ಈಗ ಸಂಪೂರ್ಣವಾಗಿ ನಿಜವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಈಗ ಫುಲ್ ವೈರಲ್ ಆಗಿದೆ.

ಸ್ವತಃ ಪ್ರಶಾಂತ್ ಕಿಣಿ ಅವರು ಮತ್ತೊಮ್ಮೆ ಈ ಪೋಸ್ಟ್ ಹಂಚಿಕೊಂಡಿದ್ದು, ಅಲ್ಲದೆ ಬಾಂಗ್ಲಾದೇಶದ ಪ್ರಸಕ್ತ ಪರಿಸ್ಥಿತಿ ಕುರಿತು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಬಾಂಗ್ಲಾದೇಶದ ಪರಿಸ್ಥಿತಿ ಈಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಮುಂಬರುವ ದಿನಗಳು ಆ ದೇಶದ ಪಾಲಿಗೆ ಕರಾಳ ದಿನಗಳಾಗಲಿದ್ದು, ಆರ್ಥಿಕವಾಗಿ ದಿವಾಳಿಯಾಗುವ ಸಾಧ್ಯತೆ ಇದೆ. ಕೋಮು ದಳ್ಳುರಿ ದೇಶದಾದ್ಯಂತ ಹೊತ್ತಿ ಉರಿಯಲಿದ್ದು, ಮೂಲಭೂತವಾದಿಗಳ ಕೈಗೆ ಆ ದೇಶ ಹೋಗುವ ಸಾಧ್ಯತೆ ಇದೆ. ಅಲ್ಲದೆ ಪಾಕಿಸ್ತಾನದ ಐಎಸ್ಐ ಕೂಡ ಹಸ್ತಕ್ಷೇಪ ಮಾಡಲಿದೆ ಎಂದಿದ್ದಾರೆ.

2023ರಲ್ಲಿ ಪ್ರಶಾಂತ್ ಕಿಣಿ ನುಡಿದಿದ್ದ ಭವಿಷ್ಯ ಈಗ ನಿಜವಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನೆಟ್ಟಿಗರು, ಬಾಂಗ್ಲಾದೇಶದ ಮುಂದಿನ ಭವಿಷ್ಯ ಕುರಿತು ಈಗ ಅವರು ನುಡಿದಿರುವ ಮಾತು ಕೂಡ ನಿಜವಾಗಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read