ನವದೆಹಲಿ: ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೀಗ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಬೆದರಿಕೆಗೆ ನಾವು ಸರಿಯಾದ ಉತ್ತರವನ್ನೇ ಕೊಡುತ್ತೇವೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಗಿದಿಲ್ಲ, ಸದ್ಯಕ್ಕೆ ನಿಂತಿದೆ ಅಷ್ಟೇ ಎಂದು ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಳಿಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಉಗ್ರರನ್ನು ಸದೆಬಡಿದಿದ್ದೇವೆ. ನಮ್ಮ ಭಾರತದ ಪಡೆಗಳು ಹೋರಾಟಕ್ಕೆ ಸಿದ್ಧವಾಗಿವೆ. ಯಾವುದೇ ಉಗ್ರ ಕೃತ್ಯಕ್ಕೆ ಸಜ್ಜಾಗಿವೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರಿಟ್ಟಿದೆ. ಮತ್ತೆ ಉಗ್ರವಾದ ಆದರೆ ನಮ್ಮದೇ ರೀತಿಯಲ್ಲಿ ಉತ್ತರಿಸುತ್ತೇವೆ. ರಣರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಯಾವತ್ತೂ ಸೋತಿಲ್ಲ. ಹೊಸ ಯುಗದ ಯುದ್ಧದಲ್ಲಿಯೂ ಭಾರತದ ಶ್ರೇಷ್ಠತೆ ಇದೆ ಎಂದು ಹೇಳಿದ್ದಾರೆ.
ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಬಲವನ್ನು ನೋಡುತ್ತಿದ್ದಾರೆ. ಆಪರೇಷನ್ ಸಿಂಧೂರ ಒಂದು ಮಾನದಂಡವನ್ನು ರೂಪಿಸಿದೆ. ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆಯ ಸಮಯ ಬಂದಿದೆ. ಯಾವುದೇ ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ನಾವು ಹೆದುರುವುದಿಲ್ಲ. ಪಾಕಿಸ್ತಾನ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು. ಅಲ್ಲಿಯವರೆಗೆ ಶಾಂತಿಯ ಯಾವುದೇ ದಾರಿಯೂ ಇಲ್ಲ. ಉಗ್ರರು, ಉಗ್ರರಿಗೆ ಬೆಂಬಲ ನೀಡುವವರು ಇಬ್ಬರೂ ಒಂದೇ. ಪಾಕಿಸ್ತಾನ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು ಎಂದು ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಎಂದು ನೇರ ಎಚ್ಚರಿಕೆ ನೀಡಿದ ಮೋದಿ ಪಾಕಿಸ್ತಾನ ಬದುಕಬೇಕು ಎಂದರೆ ಉಗ್ರವಾದ ನಿಲ್ಲಿಸಲೇಬೇಕು. ನೀರು ಮತ್ತು ರಕ್ತ ಒಂದೇ ದಾರಿಯಲ್ಲಿ ಹರಿಯುವುದಿಲ್ಲ. ಉಗ್ರವಾದ, ವ್ಯಾಪಾರ ಜೊತೆಗಿರಲು ಆಗುವುದಿಲ್ಲ ಎಂದಿದ್ದಾರೆ.