ಭಾರತ – ಬಾಂಗ್ಲಾ ನಡುವಿನ ಪಂದ್ಯದ ವೇಳೆ ಶುಬ್‌ಮನ್ ಗಿಲ್‌ಗೆ ಚಿಯರ್‌ಅಪ್ ಮಾಡಿದ ಸಾರಾ !

ವಿಶ್ವಕಪ್‌ನಲ್ಲಿ ಕ್ರಿಕೆಟ್ ದಿಗ್ಗಜರಾದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರೋಮಾಂಚಕಾರಿ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪ್ರತ್ಯಕ್ಷರಾಗಿ ಬಹಳಷ್ಟು ಉತ್ಸುಕರಾಗಿ ಪಂದ್ಯ ವೀಕ್ಷಿಸಿದ್ರು. ಈ ವೇಳೆ ಶುಭ್​ಮನ್ ಗಿಲ್ ಬಾರಿಸಿದ ಸಿಕ್ಸರ್​ಗೆ ಸಾರಾ ತೆಂಡೂಲ್ಕರ್ ನೀಡಿದ ಪ್ರತಿಕ್ರಿಯೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಚಿಯರ್ ಅಪ್ ಮಾಡಿದ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾರಾ ತೆಂಡೂಲ್ಕರ್ ಅವರು ಶುಬ್‌ಮಾನ್ ಗಿಲ್‌ಗೆ ಫುಲ್ ಸಪೋರ್ಟ್ ನೀಡಿರೋದು ಸಾಕಷ್ಟು ಚರ್ಚೆಯಾಗ್ತಿದೆ. ಅವರ ಉತ್ಸಾಹಭರಿತ ಚಿಯರ್ಸ್ ಮತ್ತು ಜನಸಂದಣಿಯ ನಡುವೆ ಅವರು ಕಾಣಿಸಿಕೊಂಡಿರುವುದು ಇಂಟರ್‌ನೆಟ್‌ನಲ್ಲಿ ಸಖತ್ ಟ್ರೆಂಡ್ ಆಗಿದ್ದಲ್ಲದೆ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.

ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದ ಗಿಲ್, ನಂತರ ರೋಹಿತ್​ರಂತೆ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಇದೇ ವೇಳೆ ಭಾರತದ ಇನ್ನಿಂಗ್ಸ್​ನ 4ನೇ ಓವರ್​ 4ನೇ ಎಸೆತವನ್ನು ಎದುರಿಸಿದ ಗಿಲ್, ಆ ಎಸೆತವನ್ನು ಲಾಂಗ್ ಆಫ್​ನಲ್ಲಿ ಸೀದಾ ಸಿಕ್ಸರ್​ಗಟ್ಟಿದರು. ಗಿಲ್​ ಅವರ ಈ ಸಿಕ್ಸರ್​ಗೆ ಇಡೀ ಮೈದಾನವೇ ಹುಚ್ಚೆದು ಕುಣಿಯಿತು. ಅದರಲ್ಲೂ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರುವ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಚಪ್ಪಾಳೆ ತಟ್ಟುತ್ತ ನಗುವಿನೊಂದಿಗೆ ಸಂಭ್ರಮಾಚರಣೆ ಮಾಡಿದರು. ಸಾರಾ ನೀಡಿರುವ ಈ ರಿಯಾಕ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇನ್ನೊಂದು ವಿಚಾರವಂದ್ರೆ ಸಾರಾ ತೆಂಡೂಲ್ಕರ್ ಅವರ ವಿಡಿಯೋ ಈ ಪರಿ ವೈರಲ್ ಆಗಲು ಕಾರಣವೂ ಇದೆ. ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಭ್​ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಬಹಳ ದಿನಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಇಬ್ಬರು ಸಹ ಹೋಟೆಲ್​ಗಳಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಹಲವರ ಮಾತಾಗಿದೆ. ಆದರೆ ಈ ವದಂತಿಯ ಬಗ್ಗೆ ಈ ಇಬ್ಬರು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

https://twitter.com/i/status/1715010636672045169

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read