ಶೀಘ್ರದಲ್ಲೇ ಬರಲಿದೆ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ; 2-ಸೀಟರ್‌ ವಿಮಾನದ ವಾಣಿಜ್ಯೋತ್ಪಾದನೆಗೆ ಡಿಜಿಸಿಎ ‘ಗ್ರೀನ್ ಸಿಗ್ನಲ್’

ಲಂಬವಾಗಿ ಟೇಕಾಫ್ ಹಾಗೂ ಲ್ಯಾಂಡಿಂಗ್ ಮಾಡಬಲ್ಲ ಎಲೆಕ್ಟ್ರಿಕ್ ವಿಮಾನಗಳ ಅಭಿವೃದ್ಧಿ ಮಾಡುತ್ತಿರುವ ಚೆನ್ನೈ ಮೂಲದ ಇಪ್ಲೇನ್ ಕಂಪನಿ ಈ ಸಂಬಂಧ ಅಭಿವೃದ್ಧಿಪಡಿಸಿದ ವಿನ್ಯಾಸಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ.

ವಿಮಾನ ನಿರ್ಮಾಣಕ್ಕೆ ಅಗತ್ಯವಾದ ಪ್ರಮಾಣೀಕರಣ ಪ್ರಕ್ರಿಯೆಯ ಅತ್ಯಂತ ಮುಖ್ಯವಾದ ಅನುಮತಿ ಇದಾಗಿದೆ. ಈ ಅನುಮೋದನೆಯಿಂದಾಗಿ ಇಪ್ಲೇನ್ ಕಂಪನಿ e200 eVTOL ಹೆಲಿಕಾಪ್ಟರ್‌ಗಳ ವಾಣಿಜ್ಯ ಉತ್ಪಾದನೆಗೆ ಚಾಲನೆ ನೀಡಲು ಹಾದಿ ಸ್ಪಷ್ಟವಾಗಿದೆ.

ಎರಡು ಸೀಟರ್‌ ಎಲೆಕ್ಟ್ರಿಕ್ ವಿಮಾನವಾದ ಇಪ್ಲೇನ್‌ ಅನ್ನು ದೇಶದ ಮೊದಲ ಹಾಗೂ ಜಗತ್ತಿನ ಅತ್ಯಂತ ವಿಶಿಷ್ಟವಾದ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿಯಾಗಿ ಅಭಿವೃದ್ಧಿಪಡಿಸುವ ಮೂಲಕ, ನಗರಗಳ ಒಳಗಿನ ಸಂಚಾರ ಹಾಗೂ ಸರಕು ಸಾಗಾಟವನ್ನು ಇನ್ನಷ್ಟು ಸುಗಮಗೊಳಿಸಲು ಕಂಪನಿ ಉದ್ದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read