ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಮುಂದುವರೆದಿದ್ದು, ಪಾಕಿಸ್ತಾನ ಸೇನೆ ಭಾರತದ ರಾಜಧಾನಿ ದೆಹಲಿ ಟರಗೆಟ್ ಮಾಡಿ ಕ್ಷಿಪಣಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಪಕಿಸ್ತಾನ ಸೇನೆ ದೆಹಲಿ ಗುರಿಯಾಗಿಸಿ ಪತೇಹ್-1 ಕ್ಷಿಪಣಿ ದಾಳಿ ನಡೆಸಿದೆ. 400 ಕಿ.ಮೀ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ದಾಳಿಗೆ ಯತ್ನಿಸಿದೆ. ಪಾಕಿಸ್ತಾನದ ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಹರಿಯಾಣದ ಸಿರ್ಸಾ ಬಳಿ ಭಾರತೀಯ ಸೇನೆ ಪಾಕಿಸ್ತಾನ ಕ್ಷಿಪಣಿಯನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಫತೇಹ್ ಕ್ಷಿಪಣಿ 2025ರಲ್ಲಿ ಪಾಕಿಸ್ತಾನ ಸೇನೆಗೆ ಸೇರ್ಪಡೆಯಾಗಿತ್ತು.