India-Maldives row : ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಮೂವರು ಸಚಿವರನ್ನು ವಜಾಗೊಳಿಸಿದ ಮಾಲ್ಡೀವ್ಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಮಾಲ್ಡೀವ್ಸ್ನ ಮೂವರು ಯುವ ಸಚಿವರನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ಅಧಾಧು ವರದಿ ಮಾಡಿದೆ.

ಮಾಲ್ಡೀವ್ಸ್ ಸಚಿವರಾದ ಮರಿಯಮ್ ಶಿಯುನಾ, ಮಹಜೂಮ್ ಮಜೀದ್ ಮತ್ತು ಮಲ್ಶಾ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

ಈ ವಿಷಯವನ್ನು ಪರಿಶೀಲಿಸಲು ಕೈಗೊಂಡ ಕ್ರಮಗಳ ಭಾಗವಾಗಿ ಮೂವರು ಉಪ ಸಚಿವರನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಸಂವಹನ ಸಚಿವ ಇಬ್ರಾಹಿಂ ಖಲೀಲ್ ಅಧಾಧುಗೆ ತಿಳಿಸಿದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read