ಬಾಂಗ್ಲಾ, ಭೂತಾನ್, ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚಿನ ನಿರುದ್ಯೋಗವಿದೆ : ರಾಹುಲ್ ಗಾಂಧಿ

ನವದೆಹಲಿ : ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದಂತಹ ದೊಡ್ಡ ನಿರ್ಧಾರಗಳಿಂದ ಪ್ರಧಾನಿ ನರೇಂದ್ರ ಮೋದಿ ಸಣ್ಣ ಉದ್ಯಮಗಳನ್ನು ಮುಗಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರ ನೀತಿಗಳಿಂದಾಗಿ ಬಾಂಗ್ಲಾದೇಶ, ಭೂತಾನ್ ಮತ್ತು ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚಿನ ನಿರುದ್ಯೋಗವಿದೆ.

ಇಂದು, ಕಳೆದ 40 ವರ್ಷಗಳಲ್ಲಿ ದೇಶದಲ್ಲಿ ಗರಿಷ್ಠ ನಿರುದ್ಯೋಗವಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ದುಪ್ಪಟ್ಟಾಗಿದೆ. ನಾವು ಬಾಂಗ್ಲಾದೇಶ ಮತ್ತು ಭೂತಾನ್ ಗಿಂತ ಹೆಚ್ಚು ನಿರುದ್ಯೋಗಿ ಯುವಕರನ್ನು ಹೊಂದಿದ್ದೇವೆ, ಏಕೆಂದರೆ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣ ಮತ್ತು ಜಿಎಸ್ ಟಿಯನ್ನು ಜಾರಿಗೆ ತರುವ ಮೂಲಕ ಸಣ್ಣ ಉದ್ಯಮಗಳನ್ನು ಮುಗಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಮ್ಮ ಹಿಂದಿನ ಯಾತ್ರೆಯ ಸಮಯದಲ್ಲಿ ಜನರು ‘ನೀವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೀರಿ, ಆದರೆ ಇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಢ, ಗುಜರಾತ್ ಮತ್ತು ಈಶಾನ್ಯ ರಾಜ್ಯಗಳ ಬಗ್ಗೆ ಏನು ಕತೆ ?’ ಎಂದು ಕೇಳಿದರು. ಅದಕ್ಕಾಗಿಯೇ ನಾವು ನಮ್ಮ ಎರಡನೇ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅದಕ್ಕೆ ‘ನ್ಯಾಯ್’ ಎಂಬ ಪದವನ್ನು ಸೇರಿಸಿದ್ದೇವೆ” ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read