52 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ: ಹಾಕಿಯಲ್ಲಿ ಮೂರನೇ ಗೆಲುವು

ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬರವನ್ನು ಕೊನೆಗೊಳಿಸಿದ ಭಾರತ 1972 ರ ನಂತರ ಒಲಿಂಪಿಕ್ಸ್‌ ನಲ್ಲಿ ಮೊದಲ ಬಾರಿಗೆ ಸೋಲಿಸಿದೆ.

ಭಾರತ ಹಾಕಿ ತಂಡವು ಪ್ಯಾರಿಸ್‌ ನಲ್ಲಿ ನಡೆದ ಪೂಲ್ ಬಿ ಪಂದ್ಯದಲ್ಲಿ ಗೆಲುವಿನೊಂದಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬರವನ್ನು ಕೊನೆಗೊಳಿಸಿದೆ. ಹರ್ಮನ್‌ಪ್ರೀತ್ ಸಿಂಗ್ ತಂಡವು ಪ್ರಬಲ ಆಸೀಸ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ನಡೆಯುತ್ತಿರುವ ಒಲಿಂಪಿಕ್ ಗೇಮ್ಸ್‌ ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಗ್ರೂಪ್ ಹಂತದಲ್ಲಿ ಭಾರತದ ಮೂರನೇ ಗೆಲುವಾಗಿದೆ.

ಮೆನ್ ಇನ್ ಬ್ಲೂ ಸ್ಟ್ರೈಕರ್ ಅಭಿಷೇಕ್ 12ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮುಂದಿನ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಗೋಲು ಗಳಿಸಿದ್ದರಿಂದ ಭಾರತ ಮುನ್ನಡೆ ಸಾಧಿಸಿತು.. ಭಾರತದ ಗೋಲ್‌ಕೀಪರ್ ಎಸ್. ಶ್ರೀಜೇಶ್ ಅವರನ್ನು ಸೋಲಿಸಲು ಕ್ರೇಗ್ ಟ್ಯಾಪ್ ಹಾಕಿದಾಗ ಆಸ್ಟ್ರೇಲಿಯಾ 25 ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿತು. ವಿರಾಮದ ವೇಳೆಗೆ ಭಾರತ 2-1 ಮುನ್ನಡೆ ಸಾಧಿಸಿತ್ತು.

ಮುಂದಿನ ಅರ್ಧಕ್ಕೆ ಬರುವಾಗ, ಭಾರತೀಯರು ತೀವ್ರತೆಯನ್ನು ಮುಂದುವರೆಸಿದರು. ಹರ್ಮನ್‌ಪ್ರೀತ್ 32ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಗೋಲು ಗಳಿಸಿದರು. 3-2 ಅಂತರದಲ್ಲಿ ಭಾರತ ಗೆಲುವು ಸಾಧಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read