ದೇಶದ ಜನತೆಗೆ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ವದೇಶಿ MRI ಸ್ಕ್ಯಾನಿಂಗ್ ಯಂತ್ರ ಅಭಿವೃದ್ಧಿ: ಚಿಕಿತ್ಸೆ ದರ ಇಳಿಕೆ

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಅಕ್ಟೋಬರ್ ನಲ್ಲಿ ದೆಹಲಿಯ ಎನ್ಸ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಸ್ವದೇಶಿ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗುವುದು. ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಿ ಅವಲಂಬನೆ ಕಡಿಮೆ ಮಾಡಲು ಮತ್ತು ಚಿಕಿತ್ಸಾ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ಕುರಿತು ಏಮ್ಸ್ ಮತ್ತು ಸೊಸೈಟಿ ಆಫ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಸ್ವದೇಶಿ ಯಂತ್ರಗಳ ಅಳವಡಿಕೆಯಿಂದ ಚಿಕಿತ್ಸೆ ದರ ಕಡಿಮೆಯಾಗಲಿದೆ ಎನ್ನಲಾಗಿದೆ.

ಭಾರತವು ತನ್ನ ಮೊದಲ ಸ್ಥಳೀಯ MRI ಯಂತ್ರವನ್ನು ಅಭಿವೃದ್ಧಿಪಡಿಸಿದೆ, ಇದನ್ನು ಅಕ್ಟೋಬರ್ ವೇಳೆಗೆ ದೆಹಲಿಯ AIIMS ನಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು. ಈ ಕ್ರಮವು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಆಮದು ಮಾಡಿಕೊಂಡ ವೈದ್ಯಕೀಯ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಪ್ರಸ್ತುತ 80-85 ಪ್ರತಿಶತ ಉಪಕರಣಗಳು ಆಮದು ಮಾಡಿಕೊಳ್ಳಲ್ಪಟ್ಟಿವೆ. ಸ್ಥಳೀಯ MRI ಯಂತ್ರವು ಭಾರತವನ್ನು ವೈದ್ಯಕೀಯ ತಂತ್ರಜ್ಞಾನದಲ್ಲಿ ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಕ್ರಿಟಿಕಲ್ ಕೇರ್, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಐಸಿಯುಗಳು, ರೊಬೊಟಿಕ್ಸ್, ಎಂಆರ್‌ಐಗಳಲ್ಲಿನ ಹೆಚ್ಚಿನ ಉಪಕರಣಗಳು ಆಮದು ಮಾಡಿಕೊಂಡ ಉಪಕರಣಗಳಾಗಿವೆ ಈಗ ನಾವು ವಿಶ್ವದ ಅತ್ಯುತ್ತಮ ಉಪಕರಣಗಳನ್ನು ಹೊಂದಲು ಬಯಸುತ್ತೇವೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ. ಎಂ. ಶ್ರೀನಿವಾಸ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read