ಭಾರತ-ಆಸ್ಟ್ರೇಲಿಯಾ ಸಂಬಂಧ ಬೆಸೆದ ಕ್ರಿಕೆಟ್, ಯೋಗ, ಪರಸ್ಪರ ನಂಬಿಕೆ, ಗೌರವ: ಪ್ರಧಾನಿ ಮೋದಿ

ಭಾರತ-ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭೌಗೋಳಿಕ ಅಂತರ ಮತ್ತು ವಿಭಿನ್ನ ಜೀವನಶೈಲಿಗಳ ಹೊರತಾಗಿಯೂ, ಯೋಗ ಮತ್ತು ಕ್ರಿಕೆಟ್ ಎರಡು ದೇಶಗಳ ಜನರನ್ನು ಯುಗಗಳಿಂದಲೂ ಸಂಪರ್ಕದಲ್ಲಿರಿಸಿದೆ. ಈಗ ಟೆನಿಸ್ ಮತ್ತು ಚಲನಚಿತ್ರಗಳು ಕೂಡ ಸಂಪರ್ಕ ಸೇತುವೆಗಳಾಗಿವೆ. ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ನಿಧನರಾದಾಗ ಲಕ್ಷಾಂತರ ಭಾರತೀಯರು ದುಃಖಿತರಾಗಿದ್ದರು ಎಂದು ಹೇಳಿದರು.

ಭಾರತವು ವಿಶ್ವದ ಅತಿದೊಡ್ಡ ಪ್ರತಿಭಾ ಕಾರ್ಖಾನೆಯನ್ನು ಹೊಂದಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು ದೇಶವನ್ನು ಜಾಗತಿಕ ಆರ್ಥಿಕತೆಯಲ್ಲಿ ಪ್ರಕಾಶಮಾನವಾದ ತಾಣವೆಂದು ಪರಿಗಣಿಸುತ್ತದೆ ಎಂದು ಮೋದಿ ಪ್ರತಿಪಾದಿಸಿದರು.

ಅತ್ಯಂತ ಸವಾಲಿನ ಸಮಯದಲ್ಲೂ ಭಾರತ ದಾಖಲೆಯ ರಫ್ತು ಮಾಡಿದೆ ಎಂದು ತಿಳಿಸಿ ಕಳೆದ ಒಂಬತ್ತು ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಸುಮಾರು 500 ಮಿಲಿಯನ್ ಜನರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸಾರ್ವಜನಿಕ ವಿತರಣೆಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲಾಗಿದೆ ಎಂದು ಹೈಲೈಟ್ ಮಾಡಿದರು. ಇಂದು ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಇದು ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಡೇಟಾ ಗ್ರಾಹಕವಾಗಿದೆ. ಭಾರತವು ಸಾವಿರಾರು ವರ್ಷಗಳ ರೋಮಾಂಚಕ ನಾಗರಿಕತೆ ಮತ್ತು ಪ್ರಜಾಪ್ರಭುತ್ವದ ತಾಯಿ ಎಂದು ಮೋದಿ ಪ್ರತಿಪಾದಿಸಿದರು.

ಇಂದು ಭಾರತವನ್ನು ಜಾಗತಿಕ ಒಳಿತಿನ ಶಕ್ತಿ ಎಂದು ಕರೆಯಲಾಗುತ್ತಿದೆ. ಎಲ್ಲಿಯೇ ವಿಪತ್ತು ಸಂಭವಿಸಿದರೂ, ಸಹಾಯ ಮಾಡಲು ಭಾರತ ಸಿದ್ಧವಾಗಿದೆ ಎಂದು ಟರ್ಕಿ ಉದಾಹರಣೆಯನ್ನು ಉಲ್ಲೇಖಿಸಿ ಅವರು ಹೇಳಿದರು.

ಕಾರ್ಯಕ್ರಮದ ಸಂದರ್ಭದಲ್ಲಿ, ಬ್ರಿಸ್ಬೇನ್‌ನಲ್ಲಿ ಭಾರತವು ಹೊಸ ಕಾನ್ಸುಲೇಟ್ ಅನ್ನು ತೆರೆಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಸಿಡ್ನಿ ಉಪನಗರವನ್ನು ಲಿಟಲ್ ಇಂಡಿಯಾ ಎಂದು ಮರುನಾಮಕರಣ ಮಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read