ನೀರಿನ ಆಳದಲ್ಲಿ ಧ್ವಜಾರೋಹಣ ಮಾಡಿ ವಿಶೇಷವಾಗಿ ಸ್ವತಂತ್ರ್ಯೋತ್ಸವ ಆಚರಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ…!

ಚೆನ್ನೈ: ದೇಶದಾದ್ಯಂತ 77ನೇ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ವಿಶೇಷ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

77ನೇ ಸ್ವತಂತ್ರ್ಯೋತ್ಸವದ ಸಡಗರದಲ್ಲಿ ಎಲ್ಲೆಡೆ ತ್ರಿವರ್ಣಧ್ವಜ ಹಾರಾಡುತ್ತಿದೆ. ನೀರಿನಾಳದಿಂದ ಹಿಡಿದು ಬೆಟ್ಟ ಗುಡ್ಡ, ಗಿರಿ-ಶಿಖರಗಳವರೆಗೆ, ಶಾಲಾ-ಕಾಲೇಜು, ಕಚೇರಿ, ಕಟ್ಟಡ, ಕೋಟೆಗಳ ಮೇಲೆ ಭಾರತದ ಬಾವುಟ ರಾರಾಜಿಸುತ್ತಿದೆ…. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ನೀರಿನಾಳಕ್ಕೆ ತೆರಳಿ ರಾಷ್ಟ್ರಧ್ವಜ ಹಾರಿಸಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿ ಸ್ವತಂತ್ರ್ಯೋತ್ಸವವನ್ನು ಸಂಭ್ರಮಿಸಿದ್ದಾರೆ.

ನೀರಿನ ಆಳದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read