ಮೋದಿ ಫೋಟೋ ಜತೆಗೆ ‘ಸ್ವಾತಂತ್ರ್ಯ ದಿನಾಚರಣೆ’ ಶುಭಾಶಯ ಕೋರಿದ ಇಟಲಿ ಪ್ರಧಾನಿ: ಹೀಗಿತ್ತು ಭಾರತದ ಪ್ರಧಾನಿ ಪ್ರತಿಕ್ರಿಯೆ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೆ ಶುಭ ಹಾರೈಸಿದ್ದಾರೆ. ಇಟಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದು, ಭಾರತದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ನಾನು ಭಾರತದ ಜನರಿಗೆ ಮತ್ತು ವಿಶೇಷವಾಗಿ ಈ ಪೇಜ್ ಅನುಸರಿಸುವ ಅನೇಕ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಟಲಿ ಮತ್ತು ಭಾರತವು ಬಲವಾದ ಬಾಂಧವ್ಯ ಹೊಂದಿವೆ. ನಾವು ಒಟ್ಟಿಗೆ ಉತ್ತಮವಾದುದನ್ನು ಸಾಧಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯು ಭವಿಷ್ಯದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ತಿಳಿಸಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪೋಸ್ಟ್ ಮಾಡಿದ ಸಂದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತ್ಯುತ್ತರ ನೀಡಿದ್ದಾರೆ. ನಿಮ್ಮ ಸ್ವಾತಂತ್ರ್ಯ ದಿನದ ಶುಭಾಶಯಗಳಿಗೆ ಕೃತಜ್ಞರಾಗಿರುತ್ತೇನೆ. ಭಾರತ-ಇಟಲಿ ಸ್ನೇಹವು ಬೆಳೆಯುತ್ತಲೇ ಇರಲಿ ಎಂದು ಹೇಳಿದ್ದಾರೆ.

https://twitter.com/GiorgiaMeloni/status/1824040638712627476

https://twitter.com/narendramodi/status/1824085124163469657

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read