ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲು ಮುಟ್ಟಿದ ಅಭಿಮಾನಿ; ಫೋಟೋ ವೈರಲ್

2020 ರಿಂದ 2022ರ ಮಧ್ಯದ ವರೆಗೆ ರನ್ ಕೊರತೆಯನ್ನು ಎದುರಿಸುತ್ತಿದ್ದ ಟೀಮ್ ಇಂಡಿಯಾದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಈಗ ಮತ್ತೆ ಅಬ್ಬರಿಸುತ್ತಿದ್ದಾರೆ. ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 108 ಬಾಲುಗಳಲ್ಲಿ 166 ರನ್ ಗಳಿಸಿದ್ದು, ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ವಿರಾಟ್ ಕೊಹ್ಲಿಯವರ 108 ರನ್ ಗಳಲ್ಲಿ 8 ಸಿಕ್ಸರ್ ಹಾಗೂ 13 ಬೌಂಡರಿಗಳಿದ್ದು, ಅವರ ಆಕರ್ಷಕ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಟಿ ಟ್ವೆಂಟಿ ಏಷ್ಯಾ ಕಪ್ ನಲ್ಲಿ ಸೆಂಚುರಿ ಗಳಿಸಿದ ಬಳಿಕ ವಿರಾಟ್ ಕೊಹ್ಲಿ, ರನ್ ಗಳಿಕೆಯಲ್ಲಿ ಹಿಂದಿರುಗಿ ನೋಡಿಯೇ ಇಲ್ಲ. ಅವರ ಬ್ಯಾಟಿನಿಂದ ರನ್ ಗಳ ಸುರಿಮಳೆಯೇ ಹರಿದು ಬರುತ್ತಿದೆ.

ಭಾನುವಾರದಂದು ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ವಿರಾಟ್ ಕೊಹ್ಲಿ ಆಕರ್ಷಕ ಆಟಕ್ಕೆ ಮನಸೋತಿದ್ದ ಅಭಿಮಾನಿಯೊಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲುಮಟ್ಟಿ ನಮಿಸಿದ್ದಾರೆ. ಈ ಕ್ಷಣಕ್ಕೆ ಟೀಮ್ ಇಂಡಿಯಾದ ಇತರ ಆಟಗಾರರು ಸಾಕ್ಷಿಯಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/mufaddal_vohra/status/1614646404315779072?ref_src=twsrc%5Etfw%7Ctwcamp%5Etweetembed%7Ctwterm%5E1614646404315779072%7Ctwgr%5E7b1b5620744bf6c7c6e4023e78e2a8cccc598c47%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18english-epaper-newseigh%2Findvslfaninvadesfieldtouchesviratkohlisfeetasteammateslookedon-newsid-n462350052%3Fs%3Dauu%3D0x61fbe37283098391ss%3Dwspsm%3DY

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read