ಬೆಲೆ ಏರಿಕೆ ನಡುವೆಯೂ ಹೆಚ್ಚಿದ ಬೇಡಿಕೆ; ಕೇವಲ 15 ನಿಮಿಷಗಳಲ್ಲಿ 440 ಕೋಟಿ ಮೌಲ್ಯದ ಫ್ಲಾಟ್‌ಗಳ ಬುಕ್ಕಿಂಗ್‌….!

ಸ್ಥಿರಾಸ್ತಿ ಬೆಲೆಗಳಲ್ಲಿ ನಿರಂತರ ಏರಿಕೆ ಮುಂದುವರಿದಿದೆ. ಬಜೆಟ್‌ ಫ್ಲಾಟ್‌ ಗಳಿಗಿಂತಲೂ ಹೆಚ್ಚಾಗಿ ಐಷಾರಾಮಿ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಿಯಲ್ ಎಸ್ಟೇಟ್‌ಗೆ ಹೆಚ್ಚುತ್ತಲೇ ಇರುವ ಬೇಡಿಕೆಗೆ ಲೇಟೆಸ್ಟ್‌ ಉದಾಹರಣೆಯೆಂದರೆ ಗುರುಗ್ರಾಮ್‌ನ ವಸತಿ ಯೋಜನೆ. ಇಲ್ಲಿ 440 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್‌ಗಳು 15 ನಿಮಿಷಗಳಲ್ಲಿ ಮಾರಾಟವಾಗಿವೆ.

ಪ್ರತಿ 4 ಸೆಕೆಂಡಿಗೆ ಒಂದು ಫ್ಲಾಟ್ ಬುಕಿಂಗ್‌ !

ರಿಯಲ್ ಎಸ್ಟೇಟ್ ಕಂಪನಿ ಆಶಿಯಾನಾ ಹೌಸಿಂಗ್ ತನ್ನ ಗುರುಗ್ರಾಮ್ ಯೋಜನೆಯಲ್ಲಿ ಬಂಪರ್ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಕಂಪನಿಯು ತನ್ನ ಎಲ್ಲಾ ಫ್ಲಾಟ್‌ಗಳನ್ನು 15 ನಿಮಿಷಗಳಲ್ಲಿ ಮಾರಾಟ ಮಾಡಿದೆ. 224 ಐಷಾರಾಮಿ ಫ್ಲಾಟ್‌ಗಳನ್ನು ಒಳಗೊಂಡ ಯೋಜನೆಯ ಎಲ್ಲಾ ಫ್ಲಾಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾದವು.

ಕಳೆದ ಕೆಲ ಸಮಯದಿಂದ, ದೆಹಲಿ-ಎನ್‌ಸಿಆರ್‌ನಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ಬೇಡಿಕೆ ಮತ್ತು ಬೆಲೆ ಎರಡರಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಹೆಚ್ಚುತ್ತಿರುವ ಬೆಲೆಗಳ ಮಧ್ಯೆಯೂ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಹೆಚ್ಚುತ್ತಿರುವ ಗೃಹ ಸಾಲಗಳ ಮೇಲಿನ ಬಡ್ಡಿದರಗಳಾಗಲಿ ಅಥವಾ ಸ್ಥಿರಾಸ್ತಿಯ ಬೆಲೆಗಳಾಗಲಿ ಇದಕ್ಕೆ ಅಡ್ಡಿಯಾಗುತ್ತಿಲ್ಲ. ಜನರು ಕಡಿಮೆ ಬೆಲೆಯ ಬಜೆಟ್ ಫ್ಲಾಟ್‌ಗಳ ಬದಲಿಗೆ ಐಷಾರಾಮಿ ಫ್ಲ್ಯಾಟ್‌ಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಗುರುಗ್ರಾಮ್‌ನಲ್ಲಿರುವ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಬುಕಿಂಗ್ ಭರದಿಂದ ಸಾಗಿದೆ. 2 ಕೋಟಿ ಮೌಲ್ಯದ ಫ್ಲಾಟ್‌ಗಳು ತಕ್ಷಣವೇ ಮಾರಾಟವಾಗಿದ್ದು, 15 ನಿಮಿಷಗಳಲ್ಲಿ ಹೌಸ್‌ಫುಲ್ ಬುಕಿಂಗ್ ಮಾಡುವ ಮೂಲಕ ಕಂಪನಿಯು 440 ಕೋಟಿ ರೂಪಾಯಿ ಗಳಿಸಿದೆ. ದೆಹಲಿ ಎನ್‌ಸಿಆರ್‌ನಲ್ಲಿ ಐಷಾರಾಮಿ ಮನೆಗಳ ಕ್ರೇಜ್ ಹೆಚ್ಚುತ್ತಿದೆ. ಈ ಕಂಪನಿಯು ದೇಶದ ಒಂಬತ್ತು ನಗರಗಳಲ್ಲಿ ಯೋಜನೆಗಳನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read