ಬೆಂಗಳೂರು : ಕರ್ನಾಟಕ ಪಬ್ಲಿಕ್ ಶಾಲೆ (KPS), ಬೆಂಗಳೂರು ಪಬ್ಲಿಕ್ ಶಾಲೆ (BPS) ಹಾಗೂ ಪಿ.ಎಂ ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ (Bilingual Classes) ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆ, (KPS), ಬೆಂಗಳೂರು ಪಬ್ಲಿಕ್ ಶಾಲೆ (BPS) ಹಾಗೂ ಪಿ.ಎಂ ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ (Bilingual Classes) ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿಯನ್ನು ಈ ಕೆಳಕಂಡಂತೆ ಹೆಚ್ಚಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿಸಿದೆ.
- ವಿಭಾಗ ಪೂರ್ವ ಪ್ರಾಥಮಿಕ ಶಾಲೆ : ಗರಿಷ್ಟ ಮಿತಿ 40
- ಪ್ರಾಥಮಿಕ ಶಾಲೆ : ಗರಿಷ್ಟ ಮಿತಿ 50
- .ಪ್ರೌಢ ಶಾಲೆ : ಗರಿಷ್ಟ ಮಿತಿ 50
ಷರತ್ತುಗಳು- 2025-26ನೇ ಶೈಕ್ಷಣಿಕ ಸಾಲಿನಿಂದಲೇ ಮೇಲಿನಂತೆ ಎಲ್ಲಾ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳದ ಮಿತಿಯ ಸಂಬಂಧ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ಸುತ್ತೋಲೆ ಹೊರಡಿಸಿ ನಿಯಮಗಳಂತೆ ಅನುಷ್ಠಾನಗೊಳಿಸಲು ಕ್ರಮವಹಿಸತಕ್ಕದ್ದು.
- ಪೂರ್ವ ಪ್ರಾಥಮಿಕ ವಿಭಾಗದ ಪ್ರತಿ ತರಗತಿಯ ಶಿಕ್ಷಕ/ಶಿಕ್ಷಕಿಯ ಜೊತೆ ಒಂದು ಆಯಾ ಕಡ್ಡಾಯವಾಗಿ ಇರತಕ್ಕದ್ದು. ಶಾಲಾ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳನ್ನು ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ದಾಖಲಾತಿ ಹಾಗು ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಅವಕಾಶ ಮಾಡಿ ಕೊಡುವುದು ಎಂದು ತಿಳಿಸಿದೆ.


