ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್: ಆದಾಯ ತೆರಿಗೆ ಬದಲಾವಣೆ, ಗೃಹ ಸಾಲಕ್ಕೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್ ಫೆಬ್ರವರಿ 1 ರಂದು ಮಂಡನೆ ಆಗಲಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದು, ಸತತ 8 ಬಜೆಟ್ ಮಂಡಿಸಿದ ಮೊದಲ ಸಚಿವೆ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆ ಬದಲಾವಣೆಯಾಗುವ ಸಾಧ್ಯತೆ ಇದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, ಶೇಕಡ 30ರಷ್ಟು ತೆರಿಗೆ ಸ್ಲ್ಯಾಬ್ 15 ರಿಂದ 20 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

ಅಲ್ಲದೇ, ಆದಾಯ ತೆರಿಗೆ ಕಾಯ್ದೆ ಸರಳೀಕರಣಕ್ಕೆ ನೇರ ತೆರಿಗೆ ಕೋಡ್ ಪರಿಚಯಿಸುವ ಸಂಭವವಿದೆ.

ಇನ್ನು ಗೃಹ ಸಾಲಗಳಿಗೆ ವಿಧಿಸುವ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಮಾಡುವ ಸಂಭವವಿದೆ. ಮಹಿಳಾ ಯೋಜನೆಗಳಿಗೆ ಉತ್ತೇಜನ, ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read