ಯಪ್ಪಾ….. ಸೊಳ್ಳೆನೂ ಬಿಡಲ್ಲ ಈ ದೇಶದ ಜನ….!

ಬೇಸಿಗೆ ಬರ್ತಿದ್ದಂತೆ ಸೊಳ್ಳೆ ಕಾಡ ಹೆಚ್ಚಾಗುತ್ತೆ. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ನಾನಾ ಕರಸತ್ತು ಮಾಡ್ತೇವೆ. ಇಡೀ ದಿನ ಸೊಳ್ಳೆ ಬ್ಯಾಟ್‌ ಹಿಡಿದು ಓಡಾಡುವವರು ಅನೇಕರಿದ್ದಾರೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ ಕ್ವಾಯಿಲ್‌ ಗೆ ಬೇಡಿಕೆ ಹೆಚ್ಚಾಗುತ್ತದೆ. ನಮ್ಮ ಮನೆ, ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆ ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ತೇವೆ. ಆದ್ರೆ ಈ ದೇಶದಲ್ಲಿ ಸೊಳ್ಳೆ ಹೆಚ್ಚಾದಂತೆ ಜನರು ಹೆಚ್ಚು ಖುಷಿಯಾಗ್ತಾರೆ. ಅವರು ಸೊಳ್ಳೆ ಹೊಡೆಯೋದು ಮಾತ್ರವಲ್ಲ ಅದನ್ನು ಬಾಯಿಚಪ್ಪಿಸಿಕೊಂಡು ತಿನ್ನುತ್ತಾರೆ.

ಹೌದು, ಸೊಳ್ಳೆ ತಿನ್ನುವ ಜನರು ನಮ್ಮಲ್ಲಿದ್ದಾರೆ. ಆಫ್ರಿಕಾದ ಜನರು ಸೊಳ್ಳೆ ಪ್ರೇಮಿಗಳು. ಒಬ್ಬ ವ್ಯಕ್ತಿ ದಿನಕ್ಕೆ 10 ಲಕ್ಷ ಸೊಳ್ಳೆಯನ್ನು ತಿನ್ನಬಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ವಿಕ್ಟೋರಿಯಾ ಸರೋವರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಇದು ಇಲ್ಲಿನ ಜನರಿಗೆ ಸಂತೋಷ ನೀಡುತ್ತದೆ.

ಇಲ್ಲಿನ ಜನರು ವಿಚಿತ್ರ ಕಾರಣಕ್ಕೆ ಸೊಳ್ಳೆ ತಿನ್ನುತ್ತಾರೆ. ಗಟ್ಟಿಮುಟ್ಟಾದ ದೇಹ ಪಡೆಯಲು ಇವರು ಸೊಳ್ಳೆ ತಿನ್ನುತ್ತಾರೆ. ಸೊಳ್ಳೆಗಳು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ ಎಂದು ಆಫ್ರಿಕಾದ ಜನರು ನಂಬುತ್ತಾರೆ. ಇದೇ ಕಾರಣಕ್ಕೆ ಅವರು ಸೊಳ್ಳೆ ತಿನ್ನಲು ಆದ್ಯತೆ ನೀಡ್ತಾರೆ.

ಮೊದಲು ಸೊಳ್ಳೆಯನ್ನು ಹಿಡಿಯುವ ಅವರು ನಂತ್ರ ಅದನ್ನು ಪುಡಿ ಮಾಡಿ ಟಿಕ್ಕಿ ತಯಾರಿಸುತ್ತಾರೆ. ಸುಮಾರು 5 ಲಕ್ಷ ಸೊಳ್ಳೆಗಳಿಂದ ಟಿಕ್ಕಿ ತಯಾರಾಗುತ್ತದೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎರಡು ಟಿಕ್ಕಿ ಸೇವನೆ ಮಾಡುತ್ತಾನೆ. ಸಾಮಾಜಿಕ ಜಾಲತಾಣದಲ್ಲೂ ಇವರ ಸೊಳ್ಳೆ ಸೇವನೆ ವಿಡಿಯೋ ವೈರಲ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read