ಜಿ-20 ಶೃಂಗಸಭೆಯಲ್ಲೂ ‘INDIA’ ಬದಲಿಗೆ ‘BHARAT’ ನಾಮಫಲಕ ಪ್ರದರ್ಶನ |G 20 Summit 2023

ದೇಶದ ಹೆಸರು ಬದಲಾವಣೆ ವಿಚಾರ ಭಾರಿ ಚರ್ಚೆಯಲ್ಲಿದ್ದು, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಕೂಡ ‘ಭಾರತ್’ ಹೆಸರಿನ ಪ್ರಸ್ತಾಪ ಬಂದಿದೆ.

ಹೌದು, ಶನಿವಾರ ಇಂದು ನಡೆಯುತ್ತಿರುವ ಜಿ 20 ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗ ದೇಶದ ಹೆಸರನ್ನು ‘ಭಾರತ್’ ಎಂದು ಪ್ರದರ್ಶಿಸಲಾಯಿತು.  ಮೈಕ್ ನ ನೇಮ್ ಬೋರ್ಡ್ ನಲ್ಲಿ  ‘BHARAT’ ಎಂದು ಪ್ರದರ್ಶಿಸಲಾಯಿತು.

ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ, ಪ್ರಧಾನಿ ಮೋದಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವಾರು ವಿಶ್ವ ನಾಯಕರನ್ನು ಸ್ವಾಗತಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ ಕ್ರಿಸ್ಟಲಿನಾ ಜಾರ್ಜೀವಾ ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮಹಾನಿರ್ದೇಶಕ ಎನ್ಗೊಜಿ ಒಕೊಂಜೊ-ಇವೆಲಾ ಅವರು ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ಥಳಕ್ಕೆ ಆಗಮಿಸಿದವರಲ್ಲಿ ಮೊದಲಿಗರಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read