1975ನಲ್ಲೇ ಬ್ಲಾಕ್‌ಬಾಸ್ಟರ್ ಶೋಲೆ ಸಿನೆಮಾ ಯಾರಿಗೆ ಗೊತ್ತಿಲ್ಲ. ಇದೇ ಸಿನೆಮಾ ಈಗ ಶೋಲೆ-2 ಬರಲಿದೆಯಾ?ಈ ಒಂದು ಪ್ರಶ್ನೆ ಹುಟ್ಟು ಹಾಕಿದೆ ಧೋನಿ ಮತ್ತು ಪಾಂಡ್ಯಾ ಜೋಡಿಯ ಈ ಫೋಟೋ. ಪಾಂಡ್ಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಈ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯಾ ಬೈಕ್ ಮೇಲೆ ಕುಳಿತಿದ್ದಾರೆ ಅಷ್ಟೆ ಅಲ್ಲ ಅದೇ ಬೈಕ್‌ಗೆ ಅಟ್ಯಾಚ್ ಆಗಿರೋ ಸೈಡ್ ಸೀಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕುಳಿತಿದ್ದಾರೆ.
ಈ ಫೋಟೋ ನೋಡಿದಾಕ್ಷಣ, ಬಾಲಿವುಡ್ ಲೆಜೆಂಡ್‌ಗಳಾದ ನಟ ಅಮಿತಾಬ್-ಧರ್ಮೆಂದ್ರ ನೆನಪಾಗಿ ಬಿಡ್ತಿದ್ದಾರೆ ಅಲ್ವಾ. ಇವತ್ತಿಗೂ ಈ ಜೋಡಿ ಜಯ್-ವೀರೂ ಅಂತಾನೇ ಫೇಮಸ್ ಈ ಎವರ್‌ಗ್ರಿನ್ ಜೋಡಿಯನ್ನ ಮತ್ತೆ ನೆನಪು ಮಾಡಿಕೊಳ್ಳುವ ಹಾಗೆ ಮಾಡಿದ್ದಾರೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯಾ ಶೋಲೆ -2 ಕಮಿಂಗ್ ಸೂನ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಶೋಲೇ ಸಿನೆಮಾದಲ್ಲಿರುವಂತೆಯೇ ಇಬ್ಬರು ಹಾಡುತ್ತಾ ಸಾಗುವ ಸೀನ್ ಇದೆ ಅದೇ ರೀತಿ ಇಲ್ಲಿ ಹಾರ್ದಿಕ್ ಪಾಂಡ್ಯಾ ಆ ಸಿನಿಮಾದ ಪಾತ್ರಗಳಾದ ಜೈ ಹಾಗೂ ವೀರೂಗೆ ಧೋನಿ ಹಾಗೂ ತಮ್ಮನ್ನು ಹೋಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡಾ ತನ್ನ ಹೆಸರಿನಲ್ಲೇ ಪ್ರೊಡಕ್ಷನ್ ಹೌಸ್ ಒಂದನ್ನು ತೆರೆದಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಎಂಬ ಸಂಸ್ಥೆ ತೆರೆದಿರುವ ಧೋನಿ ಮುಂದೆ ಸಿನಿಮಾದಲ್ಲಿ ನಟಿಸಿದರೂ ಅಚ್ಚರಿ ಏನಿಲ್ಲ.
ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಸಿನಿಮಾ ನಿರ್ಮಿಸುವ ಗುರಿ ಹೊಂದಿರುವ ಧೋನಿ ಎಂಟರ್‌ಟೈನ್‌ಮೆಂಟ್ ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಸ್ಕ್ರಿಪ್ ರೈಟರ್‌ಗಳೊಂದಿಗೆ ವೈಜ್ಞಾನಿಕ ಕಾದಂಬರಿ, ಸಸ್ಪೆನ್ಸ್ ಥ್ರಿಲ್ಲರ್, ಅಪರಾಧ ಕಥೆ, ನಾಟಕ ಮತ್ತು ಹಾಸ್ಯ ಸೇರಿದಂತೆ ಅತ್ಯಾಕರ್ಷಕ ಮತ್ತು ಅರ್ಥಪೂರ್ಣ ಕಂಟೆಂಟ್ ರಚಿಸಲು ಮತ್ತು ನಿರ್ಮಿಸಲು ಮಾತುಕತೆ ನಡೆಸುತ್ತಿದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಬರಲಿದೆಯಾ? ಶೋಲೆ ಪಾರ್ಟ್-2 ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡ್ತಿದೆ.
https://twitter.com/hardikpandya7/status/1618463312781672448?ref_src=twsrc%5Etfw%7Ctwcamp%5Etweetembed%7Ctwterm%5E1618463312781672448%7Ctwgr%5E91c99be1257378e6b582cc0c380521d0282ebdf5%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fin-ranchi-hardik-pandya-recreates-sholay-moment-with-m-s-dhoni-8406262%2F