ಪಾಕಿಸ್ತಾನದ ಖ್ಯಾತ ಸಂಗೀತಗಾರ ಚಾಹತ್ ಫತೇಹ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪುನಃ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಕಾಣಿಸಿಕೊಂಡಿರುವುದು ಅವರ ಗಾಯನ ಕೌಶಲದಿಂದ ಅಲ್ಲ. ಬದಲಿಗೆ ನೃತ್ಯದಿಂದ. ಹೌದು! ಈ ಬಾರಿ ಚಾಹತ್ ಅವರು ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಅದೀಗ ಭಾರಿ ವೈರಲ್ ಆಗಿದೆ.
ನೀವು ಅತ್ಯಾಸಕ್ತಿಯ ಟ್ವಿಟರ್ ಬಳಕೆದಾರರಾಗಿದ್ದರೆ, ಚಾಹತ್ ಫತೇಹ್ ಅಲಿ ಖಾನ್ ಅವರು ಪಾಕಿಸ್ತಾನ್ ಸೂಪರ್ ಲೀಗ್ ಗೀತೆಯನ್ನು ಹಾಡುವ ವಿಡಿಯೋವನ್ನು ನೋಡಿರಬಹುದು. ಇದನ್ನು ಸಬ್ ಸೀತಾರಾಯ ಹುಮರಾಯ ಎಂದು ಕರೆಯುತ್ತಾರೆ. ಅವರು ಪ್ರಸಿದ್ಧ ಗಾಯಕ ಮತ್ತು ಸಂಗೀತಗಾರ ಎನ್ನಿಸಿದ್ದರೂ ಈಗ ನೃತ್ಯದ ಮೂಲಕ ಮನ ರಂಜಿಸಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ತಾವೇ ಹಾಡಿರುವ ‘ತುನ್ ತಾನಾ ತುನ್’ ಹಾಡಿಗೆ ಮಹಿಳೆಯೊಬ್ಬಳ ಜೊತೆ ಡಾನ್ಸ್ ಮಾಡುವುದನ್ನು ಕಾಣಬಹುದು. “ಪ್ರೇಮಿಗಳ ದಿನ ವಿಶೇಷವಾಗಿ ಬಿಡುಗಡೆಯಾದ ತುನ್ ತಾನಾ ತುನ್, ಚಾಹತ್ ಫತೇಹ್ ಅಲಿ ಖಾನ್ ಅವರೊಂದಿಗೆ ಸೂಪರ್ ಮಾಡೆಲ್ ಅಲಿಶಾ” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
https://twitter.com/chahat_fateh/status/1625280703230529538?ref_src=twsrc%5Etfw%7Ctwcamp%5Etwee
https://twitter.com/chahat_fateh/status/1623429471880589313?ref_src=twsrc%5Etfw%7Ctwcamp%5Etweetembed%7Ctwterm%5E1623429471880589313%7Ctwgr%5Edc013abe142610c9fae32493ee110b05a96e6260%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fin-new-twitter-video-pakistans-chahat-fateh-ali-khan-shows-off-his-dance-moves-watch-at-your-own-risk-2335999-2023-02-17