BIG BREAKING: ಮೂರನೇ ಅವಧಿಗೆ ನಾನೇ ಪ್ರಧಾನಿ ಎಂದು ಹಕ್ಕು ಸಾಧಿಸಿದ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ನನ್ನ 3ನೇ ಅವಧಿಯಲ್ಲಿ ಅಗ್ರ 3 ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಈ ಮೂಲಕ ಮೂರನೇ ಅವಧಿಗೆ ಪ್ರಧಾನಿಯಾಗುವ ಬಗ್ಗೆ ಪರೋಕ್ಷವಾಗಿ ಹಕ್ಕು ಸಾಧಿಸಿದ್ದಾರೆ.

ನನ್ನ ಮೂರನೇ ಅವಧಿಯಲ್ಲಿ ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ITPO ಸಮಾರಂಭದಲ್ಲಿ ಪ್ರಧಾನಿ ಮೋದಿಯವರ ದೊಡ್ಡ ಹಕ್ಕು ಸಾಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಮರುಅಭಿವೃದ್ಧಿಪಡಿಸಿದ ಐಇಸಿಸಿ ಕಾಂಪ್ಲೆಕ್ಸ್(ಭಾರತ್ ಮಂಟಪ) ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಐಟಿಪಿಒ ಕಾಂಪ್ಲೆಕ್ಸ್‌ ನಲ್ಲಿ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ಜನರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಅಡೆತಡೆಗಳನ್ನು ಸೃಷ್ಟಿಸುವ ಕೆಲಸ ಮಾಡುವ ನಕಾರಾತ್ಮಕ ಮನಸ್ಸಿನ ಜನರ ಕೊರತೆಯಿಲ್ಲ ಎಂದು ಹೇಳಿದರು.

ನನ್ನ ಮೂರನೇ ಅವಧಿಯಲ್ಲಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ‘ಯೇ ಮೋದಿ ಕಿ ಗ್ಯಾರಂಟಿ ಹೈ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

https://twitter.com/ANI/status/1684206120385101827

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read