ಕರ್ನಾಟಕದಲ್ಲಿ ಕನ್ನಡೇತರರೂ ʼಕನ್ನಡʼ ಕಲಿಯಲೇಬೇಕು; ವಿಶ್ವದ ಶ್ರೀಮಂತ ವ್ಯಕ್ತಿ ಶ್ರೀಧರ್‌ ವೆಂಬು ಟ್ವೀಟ್

 

ಕರ್ನಾಟಕದಲ್ಲಿ ಕನ್ನಡೇತರರು ಬಹು ಕಾಲದಿಂದ ವಾಸಿಸುತ್ತಿದ್ದರೂ ಕನ್ನಡ ಕಲಿಯಲು ನಿರಾಸಕ್ತಿ ತೋರಿಸುತ್ತಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಕನ್ನಡೇತರರರು ವಾಸವಾಗಿದ್ದು, ಕನ್ನಡ ಭಾಷೆ ಮಾತನಾಡಲು ಅಸಡ್ಡೆ ತೋರುತ್ತಾರೆ.

ಇದರ ಮಧ್ಯೆ ಕನ್ನಡ ಮಾತನಾಡುವಂತೆ ಕೋರಿದವರ ಮೇಲೆಯೇ ತಿರುಗಿಬಿದ್ದ ಹಲವು ಘಟನೆಗಳು ನಡೆದಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಿಂದಲೇ ಬೆಂಗಳೂರು ಎಂಬ ಉದ್ದಟತನದ ಮಾತುಗಳನ್ನು ಕೆಲವರು ಆಡಿದ್ದು, ಇದು ಸಂಘರ್ಷಕ್ಕೂ ಕಾರಣವಾಗಿತ್ತು.

ಇದೀಗ ವಿಶ್ವದ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ( CEO of Zoho corporation ) ಶ್ರೀಧರ್‌ ವೆಂಬು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಟ್ವೀಟ್‌ ಮಾಡಿದ್ದು, ಕನ್ನಡಿಗರ ಭಾವನೆಗಳಿಗೆ ನಾನು ಬೆಲೆ ಕೊಡುತ್ತೇನೆ. ಬೆಂಗಳೂರಿನಲ್ಲಿ ಬಹಳ ವರ್ಷಗಳಿಂದ ನೆಲೆಸಿದ್ದೀರಿ ಎಂದರೆ ನೀವು ಕನ್ನಡ ಕಲಿಯಬೇಕು. ನಿಮ್ಮ ಮಕ್ಕಳಿಗೂ ಕನ್ನಡ ಹೇಳಿಕೊಡಬೇಕು. ಬಹು ಕಾಲದಿಂದ ಇದ್ದರೂ ನೀವು ಕನ್ನಡ ಕಲಿತಿಲ್ಲವೆಂದರೆ ಬೆಂಗಳೂರನ್ನು ಅಗೌರವಿಸಿದಂತೆ ಎಂದಿದ್ದಾರೆ. ಶ್ರೀಧರ್‌ ವೆಂಬು ಅವರ ಟ್ವೀಟ್‌ ಅನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್‌ ಬಿಳಿಮಲೆ ಕೂಡ ಶೇರ್‌ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read