BIG NEWS: ಪ್ರೇಮ ವಿವಾಹಗಳಿಗೆ ಹೆತ್ತವರ ಸಹಿ ಕಡ್ಡಾಯ; ಗುಜರಾತ್‌ ಶಾಸಕರ ಬೇಡಿಕೆ

ಪ್ರೇಮ ವಿವಾಹಗಳ ದಾಖಲಾತಿಗೆ ಹೆತ್ತವರ ಸಹಿ ಕಡ್ಡಾಯಗೊಳಿಸಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್‌ನ ಶಾಸಕರು ಗುಜರಾತ್‌ ವಿಧಾನ ಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.

ಪ್ರೇಮ ವಿವಾಹವಾಗುವ ದಂಪತಿಗಳು ವಾಸಿಸುವ ತಾಲ್ಲೂಕಿನಲ್ಲೇ ಈ ಸಂಬಂಧ ದಾಖಲಾತಿಗಳು ಆಗಬೇಕೆಂದು ಶಾಸಕರು ಇದೇ ವೇಳೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಫತೇಸಿನ್ಹ್‌ ಚೌಹಾಣ್, “ಹೆತ್ತವರ ಅನುಮತಿ ಇಲ್ಲದೇ ಆಗುವ ಮದುವೆಗಳಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತವೆ. ಇಂಥ ಮದುವೆಗಳಿಗೆ ಹೆತ್ತವರ ಅನುಮತಿ ಇದ್ದಲ್ಲಿ ಅಪರಾಧಗಳ ಪ್ರಮಾಣವು 50%ನಷ್ಟು ಕಡಿಮೆಯಾಗುತ್ತದೆ. ಕೋರ್ಟ್ ಮದುವೆಗಳು ಸಂಬಂಧಪಟ್ಟ ಪ್ರದೇಶಗಳ ಬದಲಿಗೆ ಬೇರೆ ಜಿಲ್ಲೆಗಳಲ್ಲಿ ನೋಂದಣಿಯಾಗುತ್ತಿದೆ,” ಎಂದು ಹೇಳಿದ್ದಾರೆ.

“ನನ್ನ ಕ್ಷೇತ್ರ ಕಾಲೋಲ್‌ನಲ್ಲಿ ಹುಡುಗಿಯರನ್ನು ಅಪಹರಿಸಿ ಅವರಿಗೆ ಆಮಿಷವೊಡ್ಡಿ ಮದುವೆಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ,” ಎಂದ ಚೌಹಾಣ್, ಕೋರ್ಟ್ ಮದುವೆಗಳಿಗೆ ಹೆತ್ತವರ ಅನುಮತಿ ಬೇಕೇ ಬೇಕು ಎಂದು ಈ ಸಂಬಂಧ ಇರುವ ಕಾನೂನುಗಳಿಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದಾರೆ.

ಇದೇ ಮಾತಿಗೆ ದನಿಗೂಡಿಸಿದ ವಾವ್ ಪ್ರದೇಶದ ಕಾಂಗ್ರೆಸ್ ಶಾಸಕಿ ಗೇನಿ ಠಾಕೋರೆ, ತಾವು ಪ್ರೇಮ ವಿವಾಹಗಳಿಗೆ ವಿರೋಧಿಯಲ್ಲ ಆದರೆ ಭವಿಷ್ಯದಲ್ಲಿ ಹುಡುಗಿಯರಿಗೆ ಕಿರುಕುಳಗಳಾಗಬಾರದು ಎಂಬುದನ್ನು ಖಾತ್ರಿ ಪಡಿಸಬೇಕಿದೆ ಎಂದಿದ್ದಾರೆ.

ಶಾಸಕರ ಈ ಆಗ್ರಹದ ಕುರಿತಂತೆ ಕಾನೂನು ಸಚಿವ ರುಶಿಕೇಶ್ ಪಟೇಲ್‌ರನ್ನು ಕೇಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read