ಭಾರೀ ಮಳೆಯಿಂದ ಕೆರೆಯಂತಾದ ಪ್ರತಿಷ್ಠಿತ ಏರಿಯಾಗಳು; ಆಸ್ತಿ ಮಾರಾಟಕ್ಕೆ ಮುಂದಾದ ಮಾಲೀಕರು….!

ಇಷ್ಟು ದಿನ ಬಿರು ಬಿಸಿಲಿನಿಂದ ಬೇಯುತ್ತಿದ್ದ ಬೆಂಗಳೂರು ಇತ್ತೀಚಿಗೆ ಮಳೆಯಿಂದ ಕೂಲ್ ಕೂಲ್ ಆಗಿದೆ. ಮಳೆ ಇಳೆಯನ್ನ ತುಂಪು ಮಾಡಿರುವುದಷ್ಟೇ ಅಲ್ಲ ಬಿಬಿಎಂಪಿ ಅರ್ಧಂಬರ್ಧ ಕಾಮಗಾರಿಗಳಿಂದ ಕೆಲ ಪ್ರತಿಷ್ಠಿತ ಪ್ರದೇಶಗಳು ಕೆರೆಗಳಂತಾಗಿವೆ. ಇದರಿಂದ ಬೇಸತ್ತ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಆಸ್ತಿ ಮಾಲೀಕರು ವಿಲ್ಲಾಗಳು, ಫ್ಲಾಟ್‌ಗಳು ಮತ್ತು ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇತ್ತೀಚಿಗೆ ಯಲಹಂಕದ ನಾರ್ತ್‌ವುಡ್ ರೆಸಿಡೆನ್ಶಿಯಲ್ ಎನ್‌ಕ್ಲೇವ್‌ನಲ್ಲಿ ಸುರಿದ ಭಾರೀ ಮಳೆಯಿಂದ ಪ್ರದೇಶ ಸಂಪೂರ್ಣ ಜಲಾವೃತವಾಗಿತ್ತು. ಪರಿಸ್ಥಿತಿ ಕೆಟ್ಟದಾಗುತ್ತಿದ್ದಂತೆ ನಿವಾಸಿಗಳನ್ನ ಹೋಟೆಲ್‌ಗಳು ಮತ್ತು ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಸ್ಥಳಾಂತರವಾಗುವಂತೆ ಒತ್ತಾಯಿಸಲ್ಪಟ್ಟ ನಂತರ, ಓರ್ವ ಆಸ್ತಿ ಮಾಲೀಕರು ತಮ್ಮ 2.5 ಕೋಟಿ ರೂ. ಮೌಲ್ಯದ ವಿಲ್ಲಾವನ್ನು ಮಾರಾಟ ಮಾಡಲು ನಿರ್ಧರಿಸಿದರು.

ನಾರ್ತ್‌ವುಡ್ ಹೌಸಿಂಗ್ ಸೊಸೈಟಿಯ ಸದಸ್ಯರ ಪ್ರಕಾರ, ಅವರು ತಾವು ಖರೀದಿಸಿದ್ದಾಗ ಕೊಟ್ಟ ಹಣದಷ್ಟು ಮಾರಾಟದ ವೇಳೆಯೂ ಪಡೆಯುತ್ತಾರೆಂಬ ಭರವಸೆ ಖಚಿತವಾಗದಿದ್ದರೂ ವಿಲ್ಲಾ ಮಾರಾಟಕ್ಕೆ ನಿರ್ಧರಿಸಿದ್ದಾರೆ. ಮತ್ತೊಬ್ಬ ನಿವಾಸಿ, ಬಿಬಿಎಂಪಿ ಕಾಮಗಾರಿ ಪೂರ್ಣಗೊಳಿಸುವವರೆಗೆ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಕಾಮಗಾರಿ ಪೂರ್ಣಗೊಂಡರೂ ನೆರೆ ಸ್ಥಿತಿ ನಿಲ್ಲುತ್ತದೆ ಎಂಬ ಭರವಸೆ ಇಲ್ಲದಂತಾಗಿದೆ ಎಂದರು.

ಕಳೆದ ವರ್ಷವೂ ಇದೇ ರೀತಿಯ ಪರಿಸ್ಥಿತಿಯಿಂದಾಗಿ ರೈನ್‌ಬೋ ಡ್ರೈವ್ ಲೇಔಟ್‌ನಲ್ಲಿ 1.8 ಕೋಟಿ ರೂ. ಮೌಲ್ಯದ ವಿಲ್ಲಾವನ್ನು ಮಾಲೀಕರು ಕಡಿಮೆ ಬೆಲೆಗೆ ಬಾಡಿಗೆಗೆ ನೀಡಿದ್ದರು. ಮಾಲೀಕರು ಬೇರೆ ಕಡೆ ತೆರಳಿ ಪ್ರಸ್ತುತ ಬಾಡಿಗೆ ಸ್ಥಳದಲ್ಲಿ ವಾಸಿಸುತ್ತಿದ್ದು, ತಿಂಗಳಿಗೆ 1.2 ಲಕ್ಷ ರೂ.ಪಾವತಿಸುತ್ತಿದ್ದಾರೆ. ಇದೀಗ ಆರ್ಥಿಕವಾಗಿ ನಷ್ಟವಾಗಿರುವುದರಿಂದ ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಬಡಾವಣೆಯ ಮೂಲಗಳು ತಿಳಿಸಿವೆ.

ಮುಳುಗಡೆಯಿಂದ ಸುದ್ದಿಯಾಗಿದ್ದ ಹೊರಮಾವು ಶ್ರೀ ಸಾಯಿ ಲೇಔಟ್‌ನ ನೀಲುಫರ್ ಅಹ್ಮದ್ ಅವರು ತಮ್ಮ ಬಡಾವಣೆಯಲ್ಲಿ ಐದಕ್ಕೂ ಹೆಚ್ಚು ಮನೆಗಳನ್ನು ಅರ್ಧದಷ್ಟು ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ಮಾಲೀಕರಿಗೆ ಮಾರಾಟ ಮಾಡದೆ ಬೇರೆ ದಾರಿ ಇರಲಿಲ್ಲ. ಆರಂಭದಲ್ಲಿ, ನಾನು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸಿದೆ. ಆದರೆ ನಾನು 1 ಕೋಟಿ ರೂ. ಪಾವತಿಸಿದ ಆಸ್ತಿಗೆ ಖರೀದಿದಾರರು 50 ಲಕ್ಷ ರೂಪಾಯಿ ಕೊಡುತ್ತೀವೆಂದಿದ್ದಕ್ಕೆ ನಾನು ಯೋಜನೆಯನ್ನು ಕೈಬಿಟ್ಟೆ ಎಂದಿದ್ದಾರೆ.

ಮುಂಗಾರು ಪೂರ್ವದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆ ವಹಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ರಾಧಿಕಾರದ ಒಕ್ಕೂಟದ ಕಾರ್ಯದರ್ಶಿ ಸುರೇಶ್ ಹರಿ ಮಾತನಾಡಿ, ಸಮಸ್ಯೆ ಬಹು ಆಯಾಮಗಳಿಂದ ಕೂಡಿದೆ. ಲೇಔಟ್‌ಗಳು ಅಥವಾ ವಿಲ್ಲಾಗಳನ್ನು ರಚಿಸುವ ಮೊದಲು ಡೆವಲಪರ್‌ಗಳು ಅನೇಕ ಏಜೆನ್ಸಿಗಳಿಂದ ಅನುಮೋದನೆಯನ್ನು ಪಡೆದಿದ್ದರು ಮತ್ತು ಪ್ರತಿಯೊಬ್ಬ ಡೆವಲಪರ್‌ಗಳು ಚರಂಡಿ ಮತ್ತು ಮೋರಿಗಳನ್ನು ನಿರ್ಮಿಸುತ್ತಾರೆ.

ಈ ಲೇಔಟ್‌ಗಳು ಪ್ರವಾಹಕ್ಕೆ ಸಾಕ್ಷಿಯಾಗುತ್ತಿರುವುದರಿಂದ ಡೆವಲಪರ್‌ಗಳು ಬಿಬಿಎಂಪಿ ಮತ್ತು ಇತರ ಏಜೆನ್ಸಿಗಳ ಸಮನ್ವಯದಲ್ಲಿ ಸಮಸ್ಯೆಯನ್ನು ಪರಿಹರಿಸುತ್ತಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಸ್ತಿ ಮಾಲೀಕರು ಆಸ್ತಿಗಳನ್ನು ಮಾರಾಟ ಮಾಡುವುದು ನಿಜ, ಆದರೆ ಇದು ಕೇವಲ ತಾತ್ಕಾಲಿಕ ವಿದ್ಯಮಾನವಾಗಿದೆ ಎಂದು ಸಮರ್ಥಿಸಿಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read