ಕರೆ ಮಾಡಿ ಮನೆಗೆ ಕರೆದ ಪ್ರೇಯಸಿ: ಮುಂದೆ ನಡೆದಿದ್ದೆಲ್ಲ ಊಹೆಗೆ ನಿಲುಕದ್ದು……!

ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಬಲೋತ್ರಾ ಜಿಲ್ಲೆಯ ಸಿಂಧರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಶ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಮಗರಂ ಜೇತಿ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ಮಧ್ಯೆ ನಡೆಯುತ್ತಿದ್ದ ಪ್ರೀತಿ ಜೇತಿ ಕುಟುಂಬಸ್ಥರಿಗೆ ತಲೆನೋವಾಗಿತ್ತು. ಅನೇಕ ಬಾರಿ ಮಗರಂನನ್ನು ಹಿಡಿದಿದ್ದ ಜೇತಿ ಮನೆಯವರು ಬೆದರಿಕೆ ಹಾಕಿದ್ದರು. ನಂತ್ರ ಮನೆಗೆ ಸಿಸಿಟಿವಿ ಅಳವಡಿಸಿದ್ದರು.

ಜುಲೈ 26ರ ರಾತ್ರಿ ಜೇತಿ, ಮಗರಂಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾರೆ. 70 ಕಿಲೋಮೀಟರ್‌ ದೂರದಲ್ಲಿದ್ದ ಮಗರಂ, ಬಸ್‌ ಹಿಡಿದು ಅವಳ ಮನೆಗೆ ಬಂದಿದ್ದಾನೆ. ಆದ್ರೆ ಜೇತಿ ಬದಲು ಆಕೆ ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಮಗರಂ ಮುತ್ತಿಗೆ ಹಾಕಿ ಹಲ್ಲೆ ನಡೆಸಿದ್ದಾರೆ. ಆತನಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ಚಿತ್ರ ಹಿಂಸೆ ನೀಡಿದ್ದರಿಂದ ಮಗರಂ ಅಲ್ಲೇ ಸಾವನ್ನಪ್ಪಿದ್ದಾನೆ. ಆತನನ್ನು ಆಸ್ಪತ್ರೆಗೆ ತಂದ ಕುಟುಂಬಸ್ಥರು, ಶವ ಬಿಟ್ಟು ಓಡಿ ಹೋಗಿದ್ದಾರೆ.

ಮಗರಂ ಚಿಕ್ಕಪ್ಪ ಜೇತಿ ಸೇರಿದಂತೆ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ದಿನಗಳ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಜೇತಿ ಸೇರಿ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read