BREAKING : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ‘ಭ್ರೂಣ ಹತ್ಯೆ’ ದಂಧೆ ಬಯಲು : ಹೆಡ್ ನರ್ಸ್ ಅರೆಸ್ಟ್

ಮೈಸೂರು : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ‘ಭ್ರೂಣ ಹತ್ಯೆ’ ಯ ಕರಾಳ ದಂಧೆ ಬಯಲಾಗಿದೆ.

ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಅಬಾರ್ಷನ್ ನಡೆಯುತ್ತಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಲ್ಲಿನ ವೈದ್ಯ ಚಂದನ ಬಳ್ಳಾಲ್ ಮತ್ತು ನರ್ಸ್ ಮಂಜುಳಾಳನ್ನು ಬಂಧಿಸಲಾಗಿತ್ತು. ಇದೀಗ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಕೂಡ ಭ್ರೂಣ ಹತ್ಯೆ ದಂಧೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಹೆಡ್ ನರ್ಸ್ ಉಷಾರಾಣಿಯನ್ನು ಬಂಧಿಸಿದ್ದಾರೆ.

ಪುಟ್ಟರಾಜು ಎಂಬಾತ ಬ್ರೋಕರ್ ಮಾತಾ ಮತ್ತು ಚಾಮುಂಡೇಶ್ವರಿ ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ, ಚಾಮುಂಡೇಶ್ವರಿ ಆಸ್ಪತ್ರೆ ನರ್ಸ್ ಉಷಾರಾಣಿ ಗರ್ಭಿಣಿಯರಿಗೆ ಅಬಾರ್ಷನ್ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಹೆಣ್ಣು ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದ ಜಾಲವನ್ನು ಇತ್ತೀಚೆಗೆ ಭೇದಿಸಿದ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಕಳೆದ ಮೂರು ವರ್ಷಗಳಿಂದ ಮೈಸೂರಿನ ಮಾತಾ ಆಸ್ಪತ್ರೆ ಮತ್ತು ಬೆಂಗಳೂರಿನ ರಾಜಕುಮಾರ್ ರಸ್ತೆಯ ಆಯುರ್ವೇದಿಕ್ ಸೆಂಟರ್ ನಲ್ಲಿ ನೂರಾರು ಹೆಣ್ಣು ಮಕ್ಕಳ ಗರ್ಭಪಾತ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read