ಸ್ಟ್ರೆಚರ್‌ ಇಲ್ಲದೇ ಬೆಡ್‌ ಶೀಟ್‌ ಬಳಸಿ ಮಾವನನ್ನ ವೈದ್ಯರ ಬಳಿ ಕರೆದೊಯ್ದ ಸೊಸೆ: ಇದು ಗ್ವಾಲಿಯರ್ ಆಸ್ಪತ್ರೆಯ ಕರ್ಮಕಾಂಡ

ಕೆಲವೊಂದು ಸರ್ಕಾರಿ ಆಸ್ಪತ್ರೆಗಳ ಹದಗೆಟ್ಟಿರೋ ಪರಿಸ್ಥಿತಿ ನೋಡ್ತಿದ್ರೆ, ಚಿಕಿತ್ಸೆಗೆಂದು ಹೋದವರು ನೇರವಾಗಿ ಮಸಣಕ್ಕೆನೇ ಸೇರಿ ಬಿಡ್ತಾರೆ. ಮಧ್ಯಪ್ರದೇಶದ ಗ್ವಾಲಿಯರ್ ಸರ್ಕಾರಿ ಆಸ್ಪತ್ರೆ ಕಂಡಿಶನ್ ಹೇಗಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ ಕೆಲ ಖಾಸಗಿ ಆಸ್ಪತ್ರೆಗಳೂ, ಲಕ್ಷ-ಲಕ್ಷ ವಸೂಲಿ ಮಾಡಿಕೊಂಡರೂ, ರೋಗಿಗಳನ್ನ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಿಕೊಳ್ತಿರ್ತಾರೆ.

ಗ್ವಾಲಿಯರ್‌ನಲ್ಲಿರುವ ಜಿಆರ್‌ಎಂಸಿ ಗ್ರೂಪ್‌ ನ ಜಯ ಆರೋಗ್ಯ ಆಸ್ಪತ್ರೆಯ ಕ್ಯಾಮರಾ ಒಂದರಲ್ಲಿ ರೆಕಾರ್ಡ್ ಆದ ದೃಶ್ಯ, ಅಲ್ಲಿ ವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮಾವನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ರೋಗಿ ಕಾಲು ಮುರಿದುಕೊಂಡಿದ್ದರಿಂದ ಆತ ನಡೆಯಲು ಅಸಮರ್ಥನಾಗಿದ್ದ. ಆದ್ದರಿಂದ ಆ ಮಹಿಳೆ ಅಲ್ಲಿ ಸ್ಟ್ರೆಚರ್ ಹುಡುಕುತ್ತಾಳೆ. ಆಕೆಗೆ ಸಿಗದೇ ಹೋದಾಗ ಆಕೆ ಹಾಸಿಗೆ ಮೇಲಿದ್ದ ಬೆಡ್‌ಶಿಟ್ ಒಂದನ್ನ ತೆಗೆದುಕೊಂಡು ಅದರ ಮೇಲೆ, ತನ್ನ ಮಾವನನ್ನ ಕುಳಿತುಕೊಳ್ಳಲು ಹೇಳಿ, ಹಾಗೆಯೇ ಎಳೆದುಕೊಂಡು ಹೋಗುತ್ತಾಳೆ.

ಈ ವಿಡಿಯೋ ಈಗ ವೈರಲ್ ಆಗಿದ್ದು, ಗಜರಾಜ್ ವೈದ್ಯಕೀಯ ಕಾಲೇಜಿನ (GRMC) ವ್ಯವಸ್ಥಾಪಕರಾದ ಅಕ್ಷಯ್‌ನಿಗಮ್ ಅವರ ಗಮನಕ್ಕೆ ಬಂದಿದೆ. ಅವರು ಈಗ ಈ ಅವ್ಯವಸ್ಥೆಗೆ ಕಾರಣ ಆದವರ ಮೇಲೆ ಕಠಿಣ ಕ್ರಮವನ್ನ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಈ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ವಿಭಾಗಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಯಾವುದೇ ಸಮಸ್ಯೆ ಕಾಡದಂತೆ ನೋಡಿಕೊಳ್ಳಲಾಗಿದೆ. ಈ ಹೊಸ ಆಸ್ಪತ್ರೆಯಲ್ಲಿ ಏನಿಲ್ಲ ಅಂದರೂ ಸದ್ಯಕ್ಕೆ 60-70 ಸ್ಟ್ರೆಚರ್‌ ವ್ಯವಸ್ಥೆಗಳನ್ನ ಮಾಡಲಾಗಿದೆ. ಅಷ್ಟೆ ಅಲ್ಲ ಹೆಚ್ಚುವರಿಯಾಗಿ ಎಮರ್ಜನ್ಸಿ ಗೇಟ್ ಬಳಿ ಸದಾ 10 ಸ್ಟ್ರೆಚರ್‌ ಇರಿಸಲಾಗಿದೆ. ಆದರೂ ರೋಗಿಗಳು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅನ್ನೋದು ವಿಪರ್ಯಾಸ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಾ. ನಿಗಮ್ ಮಾಧ್ಯಮಕ್ಕೆ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read