ಆಸಿಡ್ ದಾಳಿಗೊಳಗಾದ ನಾಯಿಗೆ ನ್ಯಾಯ ಕೊಡಿಸಿದ ವಕೀಲರು; 70 ವರ್ಷದ ವ್ಯಕ್ತಿಗೆ ಜೈಲು

ವಿಕೃತ ವ್ಯಕ್ತಿಯಿಂದ ಆಸಿಡ್‌ ದಾಳಿಗೊಳಗಾದ ನಾಯಿಗೆ ದೆಹಲಿ ಮೂಲದ ವಕೀಲರೊಬ್ಬರು ಕೊನೆಗೂ ನ್ಯಾಯ ಕೊಡಿಸಿದ್ದಾರೆ. ಆಸಿಡ್‌ ದಾಳಿ ಮಾಡಿದ್ದ ಆರೋಪಿಗೆ ನ್ಯಾಯಾಲಯ ಈಗ ಜೈಲು ಶಿಕ್ಷೆ ವಿಧಿಸಿದೆ.

ದೆಹಲಿ ಮೂಲದ ವಕೀಲ ರಿದಮ್ ಶೀಲ್ ಶ್ರೀವಾಸ್ತವ ಅವರು ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ ʼಕೊಕೊʼ ಎಂಬ ನಾಯಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಫೆಬ್ರವರಿ 2020 ರಲ್ಲಿ ಪಹರ್‌ಗಂಜ್‌ನ ಮಹಿಳೆಯೊಬ್ಬರು ದೂರು ಸಲ್ಲಿಸಿದಾಗ ಪ್ರಕರಣ ಪ್ರಾರಂಭವಾಗಿದ್ದು, ಒಬ್ಬ ವ್ಯಕ್ತಿ ನಾಯಿ ಮೇಲೆ ಆಸಿಡ್‌ ಎರಚಿದ್ದರಿಂದ ಅದರ ಕಣ್ಣು, ಮುಖ ಮತ್ತು ದೇಹದ ಗಾಯವಾಗಿತ್ತು. ನಾಯಿ ಮೇಲೆ ಆಸಿಡ್ ಎರಚುವುದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಮಹಿಳೆ ಆರೋಪಿಸಿದ್ದರು.

ಆರೋಪಿ, 70 ವರ್ಷ ವಯಸ್ಸಿನ ಸ್ಟ್ರೀಟ್ ಫುಡ್ ಕಾರ್ಟ್ ಮಾಲೀಕ, ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ನಾಯಿಯನ್ನು ಕೊಂದು ಓಡಿಸಲು ಪ್ರಯತ್ನಿಸಿದ್ದ ಎಂದು ವರದಿಯಾಗಿದೆ.

ರಿದಮ್ ಅವರು ಸುಮಾರು ನಾಲ್ಕು ವರ್ಷಗಳ ಕಾಲ ಮೊಕದ್ದಮೆ ನಡೆಸಿದ್ದು, ಅಂತಿಮವಾಗಿ ಆರೋಪಿಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು 10,500 ರೂ.ಗಳ ದಂಡವನ್ನು ವಿಧಿಸಲಾಯಿತು. ಪ್ರಾಣಿ ಹಿಂಸೆ ಪ್ರಕರಣದಲ್ಲಿ ಇಂತಹ ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ವಕೀಲರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read