BIG NEWS : ರಾಜ್ಯದ ‘ಆರೋಗ್ಯ ಇಲಾಖೆ’ ಸಿಬ್ಬಂದಿಗಳಿಗೆ ಮುಖ್ಯ ಮಾಹಿತಿ : ‘ಕೌನ್ಸಿಲಿಂಗ್ ವರ್ಗಾವಣೆ’ಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದ ‘ಆರೋಗ್ಯ ಇಲಾಖೆ’ ಸಿಬ್ಬಂದಿಗಳಿಗೆ ಮುಖ್ಯ ಮಾಹಿತಿ, ಸರ್ಕಾರ ಕೌನ್ಸಿಲಿಂಗ್ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಏನಿದೆ ಆದೇಶದಲ್ಲಿ..?

2024-25ನೇ ಸಾಲಿನ ವರ್ಗಾವಣೆಯನ್ನು ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಯಡಿ ಹಾಗೂ ಈ ಕಾಯ್ದೆಯಡಿ ರಚಿಸಲಾಗಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ ದಿನಾಂಕ:31.08.2024ರ ಒಳಗಾಗಿ ಪೂರ್ಣಗೊಳಿಸಲು ಸರ್ಕಾರ ಸಹಮತಿ ನೀಡಲಾಗಿದೆ.

2024-25ನೇ ಸಾಲಿನ ಸಾರ್ವಜನಿಕ ವರ್ಗಾವಣೆ ಪ್ರಕ್ರಿಯೆಯನ್ನು ಸಮಾಲೋಚನೆ ಮೂಲಕ ವರ್ಗಾವಣೆ ಕಾಯ್ದೆ ಮತ್ತು ನಿಯಮ-2011 ಹಾಗೂ ತಿದ್ದುಪಡಿ ನಿಯಮಗಳನ್ವಯ ಕೈಗೊಳ್ಳಲು ಅಗತ್ಯ ಮಾಹಿತಿ ಕ್ರೋಡೀಕರಿಸುವ ಹಾಗೂ ಪರಿಶೀಲನಾ ಕಾರ್ಯ ಕೈಗೊಳ್ಳಲು ಉಲ್ಲೇಖ(2)ರಲ್ಲಿ ವರ್ಗಾವಣಾ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಉಲ್ಲೇಖ(2)ರ ಸರ್ಕಾರಿ ಆದೇಶದ ಕ್ರಸಂ.04ರಂತೆ ವರ್ಗಾವಣೆ ಕಾಯ್ದೆ ನಿಯಮ 5 ರನ್ವಯ ಮಿನ್ಮ್ಯಾಚ್ ಸಮಾಲೋಚನೆಯನ್ನು ದಿನಾಂಕ:19.07.2024 ರಂದು ನಡೆಸಿದ್ದು, ಆಯ್ಕೆ ಮಾಡಿಕೊಂಡ ಹುದ್ದೆ ತೃಪ್ತಿಕರವಾಗದಿದ್ದಲ್ಲಿ ಅಂತಹ ತಜ್ಞ ವೈದ್ಯರುಗಳಿಗೆ ಮತ್ತೊಮ್ಮೆ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ:19.07.2024 ರಂದು ಸಮಾಲೋಚನೆಗೆ ಹಾಜರಾಗದಿರುವ/ಹಾಜರಾಗಿರುವ ತಜ್ಞ ವೈದ್ಯರುಗಳು ಸಮಾಲೋಚನೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳದೇ ಇರುವ ಮತ್ತು ಆಯ್ಕೆ ಮಾಡಿಕೊಂಡು ವರದಿ ಮಾಡಿಕೊಳ್ಳದೇ ಇರುವ ತಜ್ಞ ವೈದ್ಯರುಗಳಿಗೆ ಮತ್ತೊಮ್ಮೆ ಸಮಾಲೋಚನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಸ್ಥಳ ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ತಜ್ಞ ವೈದ್ಯರುಗಳು ಸ್ಥಳ ತೃಪ್ತಿಕರವಾಗಿರದೇ ಮತ್ತೊಮ್ಮೆ ಸಮಾಲೋಚನೆಗೆ ಹಾಜರಾದಲ್ಲಿ ಅವರು, ಪ್ರಸ್ತುತ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಹುದ್ದೆಯನ್ನು ಖಾಲಿ ಹುದ್ದೆಯೆಂದು ಪರಿಗಣಿಸಿ ಪ್ರಕಟಿಸಲಾಗುವುದು.

ಸೆಪ್ಟೆಂಬರ್ 2024 ರವರೆಗೆ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸಿರುವುದರಿಂದ, ಕೌನ್ಸಿಲಿಂಗ್ ವರ್ಗಾವಣೆ ಪರಿಷ್ಕೃತ ವೇಳಾ ಪಟ್ಟಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.

2024-25ನೇ ಸಾಲಿನಲ್ಲಿ ವರ್ಗಾವಣೆ ಕಾಯ್ದೆ ಮತ್ತು ನಿಯಮ 7(1) (ಎ) 5ನೇ ಪ್ರಕರಣ ಮತ್ತು 7(1) (ಬಿ) ರನ್ವಯ 6ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ತಜ್ಞ ವೈದ್ಯರುಗಳ ಮಿಸ್ಮ್ಯಾಚ್ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕನಿಷ್ಠ ಸೇವಾವಧಿ ಪೂರೈಸಿರುವ ವೈದ್ಯರು, ತಜ್ಞ ವೈದ್ಯರು ಹಾಗೂ ದಂತ ಆರೋಗ್ಯಾಧಿಕಾರಿಗಳ ಮಾಹಿತಿಯನ್ನು ಸಲ್ಲಿಸುವ ವರ್ಗಾವಣೆಯ ವೇಳಾಪಟ್ಟಿಯನ್ನು ಈ ಕೆಳಕಂಡ ದಿನಾಂಕಗಳಿಗೆ ನಿಗದಿಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read