ಕೊಪ್ಪಳ ಜಿಲ್ಲೆಯ ಕುಕನೂರ ಜವಾಹರ ನವೋದಯ ವಿದ್ಯಾಲಯದ ವತಿಯಿಂದ 2025-26ನೇ ಸಾಲಿನ 6ನೇ ತರಗತಿಯ ಆಯ್ಕೆಗಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಆಗಸ್ಟ್ 13 ರೊಳಗಾಗಿ ನವೋದಯ ವಿದ್ಯಾಲಯ ಸಮಿತಿಯ ಜಾಲತಾಣ https://cbseitms.rcil.gov.in/nvs/ ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದು ಕುಕನೂರ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೆಯು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರುತ್ತದೆ. 200 ಬಹು-ಆಯ್ಕೆ ಪ್ರಶ್ನೆಗಳು(MCQ ಗಳು) ಮೂರು ವಿಭಾಗಗಳಾಗಿ ವಿಂಗಡಿಸಲ್ಪಡುತ್ತವೆ. ಪರೀಕ್ಷೆಯ ಒಟ್ಟು ಅವಧಿ ಮೂರು ಗಂಟೆ 30 ನಿಮಿಷಗಳು.