ಬೆಂಗಳೂರು: ಪೋಷಕರು ತಮ್ಮ ಮಕ್ಕಳನ್ನು ಅಧಿಕೃತ ಶಾಲೆಗಳಿಗೇ ಸೇರಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಒಕ್ಕೂಟ(ಕ್ಯಾಮ್ಸ್) ಸಲಹೆ ನೀಡಿದೆ.
ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಶಾಲೆಯ ಪೂರ್ವಪರ ವಿಚಾರಿಸಿ ಅಧಿಕೃತ ಶಾಲೆಗೆ ಸೇರಿಸುವಂತೆ ತಿಳಿಸಲಾಗಿದೆ. ಮಾನ್ಯತೆ ಪಡೆಯದ ಅನಧಿಕೃತ ಶಾಲೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಶಾಲೆಯ ಮಾನ್ಯತೆ, ಶುಲ್ಕ ಪಾರದರ್ಶಕತೆ ಸೇರಿ ಸಾಕಷ್ಟು ಮಾಹಿತಿ ಪಡೆದುಕೊಂಡು ಮಕ್ಕಳನ್ನು ಶಾಲೆಗೆ ಸೇರಿಸುವುದು ಉತ್ತಮ ಎಂದು ಹೇಳಲಾಗಿದೆ.
ಶಾಲೆಯು ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ(ಸ್ಯಾಟ್ಸ್)ಯಲ್ಲಿ ನೋಂದಾಯಿತವಾಗಿದೆಯೇ ಎನ್ನುವುದರ ಬಗ್ಗೆ ಪೋಷಕರು ಖಾತರಿಪಡಿಸಿಕೊಳ್ಳಬೇಕು. ಕಾನೂನುಬಾಹಿರವಾಗಿ ಬೇರೆ ಪಠ್ಯಕ್ರಮ ಬೋಧಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ಮಾನ್ಯತೆ ಇಲ್ಲದ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಅವರ ಶಿಕ್ಷಣದ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.