ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2025- 26ನೇ ಸಾಲಿನ ವೈದ್ಯಕೀಯ ಕೋರ್ಸ್ ಗಳ ಶುಲ್ಕ ವಿವರ ಪ್ರಕಟಿಸಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಇತರೆ ವಿಶ್ವವಿದ್ಯಾಲಯಗಳ ನೋಂದಣಿ ಶುಲ್ಕ ಸೇರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ 64,350 ರೂ. ಇದೆ.
ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟು 1,53,571 ರೂ., ಖಾಸಗಿ ಕಾಲೇಜುಗಳ ಖಾಸಗಿ ಕೋಟಾ ಸೀಟು 12,00,117 ರೂ., ಎನ್.ಆರ್.ಐ. ಕೋಟಾ ಸೀಟು 40,11,950 ರೂ. ಇದೆ.
ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ ಕೋರ್ಸ್ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರ ಈ ಮೊದಲೇ ತಿಳಿಸಿದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕದ ವಿವರ ಪ್ರಕಟಿಸಿದೆ.
ಕಳೆದ ವರ್ಷ ವಿವಿ ಶುಲ್ಕ ಹೊರತುಪಡಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸೀಟುಗಳ ಶುಲ್ಕ 50 ಸಾವಿರ ರೂ., ಖಾಸಗಿ ಮೆಡಿಕಲ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟುಗಳ ಶುಲ್ಕ 1.40 ಲಕ್ಷ ರೂ., ಆಡಳಿತ ಮಂಡಳಿ ಕೋಟಾ ಸೀಟಿನ ಶುಲ್ಕ 11.88 ಲಕ್ಷ ರೂ. ಇತ್ತು ಈ ವರ್ಷ ಶೇಕಡ 15ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ತಿರಸ್ಕರಿಸಿದೆ.