ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ ಸಿಇಟಿ/ ಯುಜಿ ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಕಾಷನ್ ಡೆಪಾಸಿಟ್ ಪಾವತಿ ಮತ್ತು ಆಯ್ಕೆ/ಇಚ್ಛೆಗಳನ್ನು ಬದಲಿಸಿಕೊಳ್ಳಲು/ ತೆಗೆದುಹಾಕಲು ಆಗಸ್ಟ್ 26ರಂದು ಮಧ್ಯಾಹ್ನ 1ಗಂಟೆವರೆಗೆ ಸಮಯ ವಿಸ್ತರಿಸಿದೆ.
ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಕೂಡ ಆಗಸ್ಟ್ 26ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಎರಡನೇ ಸುತ್ತಿನ ಅಣಕು/ ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಆಗಸ್ಟ್ 29ರಂದು ಮಧ್ಯಾಹ್ನ 1ಗಂಟೆ ನಂತರ ಪ್ರಕಟಿಸಲಾಗುತ್ತದೆ. ಅಂತಿಮ ಫಲಿತಾಂಶದ ದಿನಾಂಕವನ್ನು ನಂತರ ತಿಳಿಸಲಾಗುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಕಾಷನ್ ಡೆಪಾಸಿಟ್ ಪಾವತಿ ಮತ್ತು ಆಯ್ಕೆ/ಇಚ್ಛೆಗಳನ್ನು ಬದಲಿಸಿಕೊಳ್ಳಲು/ ತೆಗೆದುಹಾಕಲು ಆಗಸ್ಟ್ 26ರಂದು ಮಧ್ಯಾಹ್ನ 1ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 25, 2025
ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಕೂಡ ಆಗಸ್ಟ್ 26ರಂದು ಬೆಳಿಗ್ಗೆ… pic.twitter.com/DUtpHiQDpx