ಬೆಂಗಳೂರು : ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಇ-ಹಾಜರಾತಿಯನ್ನು ಖಚಿತಪಡಿಸುವ Facial Recognition ತಂತ್ರಾಂಶ ಆಧಾರಿತ “ನಿರಂತರ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಕಂಡಿಕೆ -112 ರಲ್ಲಿ “ನಿರಂತರ” ಕಾರ್ಯಕ್ರಮದಡಿ Mobile-Based Al-Driven Facial Recognition Attendance System ತಂತ್ರಜ್ಞಾನದ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿಸಿ ಆದೇಶಿಸಿದೆ.
ತಂತ್ರಾಂಶದ ಪ್ರಯೋಜನಗಳು
ಎಲ್ಲಾ ಹಂತದಲ್ಲಿನ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡಿಮೆ ಸಮಯದಲ್ಲಿ ಹೊಂದಬಹುದಾಗಿದೆ ಹಾಗೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ದೊರಕುತ್ತದೆ.ಪ್ರಸ್ತುತ ಹಾಜರಾತಿ ದಾಖಲೆಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ ನಿಖರ ಹಾಜರಾತಿಯನ್ನು ದಿನಂಪ್ರತಿ ಆಧಾರದ ಮೇಲೆ ಪಡೆಯಬಹುದಾಗಿದೆ.
ಯಾವುದೇ ಶಾಲೆಯ ಹಾಜರಾತಿಯಲ್ಲಿ ಅಸಾಧಾರಣ ಕೊರತೆಯನ್ನು ದಿನಂಪ್ರತಿ ಆಧಾರದಲ್ಲಿ ಮೇಲ್ವಿಚಾರಿಸಬಹುದಾಗಿದೆ.
ವಿವಿಧ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಅನಗತ್ಯ ಅಥವಾ ಹೆಚ್ಚುವರಿ ಅನುಧಾನ ಹಂಚಿಕೆಯನ್ನು ತಡೆಗಟ್ಟಬಹುದು.ದಿನಂಪ್ರತಿ ಆಧಾರದಲ್ಲಿ ನಿಖರವಾದ ಶಾಲಾ ಹಾಜರಾತಿಯ ವರದಿಯನ್ನು ಹೊಂದುವುದರಿಂದ ಆಯಾ ಸಂಬಂಧಿತ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಬಹುದಾದ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಿದೆ.
ಸದರಿ ಕಾರ್ಯಕ್ರಮಕ್ಕೆ ಒಟ್ಟಾರೆ 52,686 ಶಾಲೆಗಳು ಒಳಪಡುತ್ತವೆ (46,460 ಸರ್ಕಾರಿ ಶಾಲೆಗಳು ಮತ್ತು 6,226 ಅನುದಾನಿತ ಶಾಲೆಗಳು) ಹಾಗೂ ಒಟ್ಟಾರೆ 52,55,738 ವಿದ್ಯಾರ್ಥಿಗಳ ಹಾಜರಾತಿಯನ್ನು Mobile-Based Al-Driven Facial Recognition ಮೂಲಕ ಸೆರೆಹಿಡಿಯಬಹುದಾಗಿದೆ. (ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 40,74,525 ere ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ – 11,81,213 ) ಎಂದು ಅಂದಾಜಿಸಲಾಗಿದೆ.
ಈ ವ್ಯವಸ್ಥೆಯು ನೈಜ ಸಮಯದಲ್ಲಿ ವಿದ್ಯಾರ್ಥಿಗಳ ಮುಖದ ಡೇಟಾವನ್ನು ಗುರುತಿಸುತ್ತದೆ ಮತ್ತು ಸುಧಾರಿತ ವೆಕ್ಟರ್-ಆಧಾರಿತ ಮುಖ ಗುರುತಿಸುವಿಕೆ ಎಂಜಿನ್ ಅನ್ನು ಬಳಸುತ್ತದೆ (Advanced Vector-Based Facial Recognition Engine) ಸೆರೆಹಿಡಿಯಲಾದ ವಿದ್ಯಾರ್ಥಿಗಳ ಮುಖದ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಸೆರೆಹಿಡಿದು ವಿಶಿಷ್ಟ ID ಗೆ ಎನ್ ಕ್ರಿಪ್ಟ್ ಮಾಡಲಾಗುವುದಾಗಿ ಹಾಗೂ ಸೆರೆಹಿಡಿಯಲಾದ ವಿದ್ಯಾರ್ಥಿಯ ಚಿತ್ರವನ್ನು ಪುನರ್ನಿಮಿ್ರಸಲು ರಿವರ್ಸ್-ಇಂಜಿನಿಯರಿಂಗ್ ಮಾಡಲಾಗುವುದಿಲ್ಲ ಎಂದು ತಿಳಿಸಿ, ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುತ್ತದೆ ಎಂದು ತಿಳಿಸಿರುತ್ತಾರೆ.
ಸದರಿ ಯೋಜನೆಯ ಸಾಫ್ಟ್‌ವೇರ್ ಅಪ್ಲಿಕೇಷನ್ ಹಾಗೂ ದತ್ತಾಂಶವನ್ನು KSDC, ವಿಕಾಸಸೌಧದಲ್ಲಿ ಹೋಸ್ಟ್ ಮಾಡುವುದಾಗಿ ತಿಳಿಸಿ, ಯೋಜನೆಯು ಫಲಾನುಭವಿ ಆಧಾರಿತ ಯೋಜನೆಯಲ್ಲಿ ಬರುವುದಾಗಿ ಹಾಗೂ ರಾಜ್ಯ ವಲಯದಿಂದ ನಿರ್ವಹಿಸಲ್ಪಡುವುದಾಗಿ ತಿಳಿಸಲಾಗಿದೆ.



