ಕಾರ್ಮಿಕ ಭವಿಷ್ಯ ನಿಧಿ ಬಾಕಿ ವಸೂಲಾತಿ ಕ್ರಮ ಜಾರಿ

ಶಿವಮೊಗ್ಗ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ, ನವದೆಹಲಿಯು ಡಿಸೆಂಬರ್ 2023 ರಿಂದ ಫೆಬ್ರವರಿ -2024ರವರೆಗೆ ವಿಶೇಷ ವಸೂಲಾತಿ ಅಭಿಯಾನವನ್ನು ಪ್ರಾರಂಭಿಸಿದ್ದು, ಇಪಿಎಫ್ ಮತ್ತು ಎಂಪಿ ಆಕ್ಟ್ 1952ರ ಸೆಕ್ಷನ್ 8ಬಿ ಯಿಂದ 8ಜಿ ಅಡಿಯಲ್ಲಿ ಮರುಪ್ರಾಪ್ತಿ ಪ್ರಕ್ರಿಯೆಗಳು ಪಿಎಫ್ ಮತ್ತು ಅಲೈಡ್ ಬಾಕಿಗಳ ವಸೂಲಾತಿಗಾಗಿ ಪ್ರಾದೇಶಿಕ ಕಚೇರಿಯಿಂದ ಟಾಪ್ 5 ಸಂಸ್ಥೆಗಳ ವಿರುದ್ಧ ಕ್ರಮ ಜಾರಿಗೊಳಿಸಿದೆ.

ಹರಪ್ಪನಹಳ್ಳಿಯ ಮೆ|| ಕತ್ರ ಫೈಟೋಕೆಮ್ ಪ್ರೈ.ಲಿ., ಹರಿಹರದ ಮೆ|| ಸೋನಲ್ಕರ್ ಟೂಲ್ ವಕ್ರ್ಸ್ ಪ್ರೈ. ಲಿ., ಶಿವಮೊಗ್ಗದ ಬಿ. ಬಸವರಾಜ್, ಕಂಟ್ರಾಕ್ಟರ್, ಮೆ||ವೆರ್ಟೇರಾ ಡಿನ್ನರ್ವೇರ್ ಪ್ರೈ.ಲಿ., ಹಾಗೂ ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್, ಸಂತೆಕಡೂರು ಈ ಸಂಸ್ಥೆಗಳ ಉದ್ಯೋಗದಾತರ/ ನಿರ್ದೇಶಕರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿದ್ದರೆ ಅದನ್ನು ro.shivamogga@epfindia.gov.in ನಲ್ಲಿ ಹಂಚಿಕೊಳ್ಳಬಹುದಾಗಿದೆ.

ಬಲವಂತದ ಕ್ರಮಗಳನ್ನು ತಪ್ಪಿಸಲು, ಉದ್ಯೋಗದಾತರು ಪಿಎಫ್ ವಂತಿಕೆಗಳನ್ನು ನಿಗದಿತ ಅವಧಿಯಲ್ಲಿ ಮತ್ತು ಆದೇಶ ನೀಡಿದ 60 ದಿನಗಳಲ್ಲಿ ಎಲ್ಲಾ ಪಿಎಫ್ ಸಂಬಂಧಿತ ಬಾಕಿಗಳನ್ನು ಭರಿಸಲು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read