ಡಿಜಿಟಲ್ ಡೆಸ್ಕ್ : ಹಿಂದೆಯೆಲ್ಲಾ ಪತಿ ಕಾಟಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ಹೆಚ್ಚು ವರದಿಯಾಗುತ್ತಿತ್ತು. ಆದರೆ ಈಗ ಪತ್ನಿ ಕಾಟಕ್ಕೆ ಗಂಡದಿರೇ ಬೇಸತ್ತು ಸೂಸೈಡ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಹಲ್ ಚಲ್ ಎಬ್ಬಿಸಿದೆ.
ನನ್ನ ಹೆಂಡತಿ ನನಗೆ ಹೊಡೆದಾಡುತ್ತಾಳೆ ಸಾಹೇಬ್ರೇ.. ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ ..ಎಂದು ಮಧ್ಯಪ್ರದೇಶದ ಪನ್ನಾ ನಗರದ ಪೊಲೀಸ್ ಮುಖ್ಯ ಅಧೀಕ್ಷಕರ ಕಚೇರಿಗೆ ಪತಿಯೊಬ್ಬರು ದೂರು ನೀಡಿದ್ದಾರೆ. ತನ್ನ ಹೆಂಡತಿಯ ಕ್ರೂರತನದ ಕಥೆಯನ್ನು ಹೇಳುತ್ತಾ ಪತಿ ಲೋಕೇಶ್ ಕಾಪಾಡುವಂತೆ ಪೊಲೀಸರಿಗೆ ಮೊರೆಯಿಟ್ಟಿದ್ದಾನೆ. ಪತಿಗೆ ಪತ್ನಿ ಥಳಿಸಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕ್ರೂರವಾಗಿ ಥಳಿಸಿ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಷಯವನ್ನು ಗಮನಿಸಿದ ಪೊಲೀಸರು ಪತ್ನಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ನಿ, ತಾನು ಉತ್ತಮ ಜೀವನವನ್ನು ನಡೆಸುತ್ತಿದ್ದೇನೆ ಮತ್ತು ಓರ್ವ ಮಗಳನ್ನು ಹೊಂದಿದ್ದೇನೆ ಎಂದು ಹೇಳಿದರು. ಅವಳು ತನ್ನ ಮನೆ, ಕುಟುಂಬ ಮತ್ತು ತನ್ನ ಜೀವನವನ್ನು ಹಾಳುಮಾಡಲು ಬಯಸುವುದಿಲ್ಲ. “ಒಮ್ಮೆ ನಾನು ನನ್ನ ಗಂಡನನ್ನು ಹೊಡೆಯುವ ತಪ್ಪು ಮಾಡಿದೆ. ಆದರೆ ಈಗ ಅದು ಎಂದಿಗೂ ಸಂಭವಿಸುವುದಿಲ್ಲ” ಎಂದು ಅವರು ಹೇಳಿದರು. “ದಂಪತಿಗಳು ಜಗಳವಾಡುತ್ತಿದ್ದಾಗ, ನಾವು ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸಿದ್ದೇವೆ. ಆದಾಗ್ಯೂ, ಮಹಿಳೆ ನಮ್ಮ ಸಲಹೆಗಳನ್ನು ಕೇಳಲು ಸಿದ್ಧರಿರಲಿಲ್ಲ” ಎಂದು ನೆರೆಹೊರೆಯವರು ಹೇಳಿದರು.
मेरी पत्नी मुझे मारती है साहब, मुझे मेरी पत्नी से बचाओ साहब' मध्यप्रदेश के पन्ना में पुलिस अधीक्षक कार्यालय में अपनी ही पत्नी की क्रूरता की कहानी बताते हुए लोकेश ने आवेदन सौंपा और मदद की गुहार लगाई. पत्नी द्वारा पिटाई का सीसीटीवी फुटेज आया सामने.#MadhyaPradesh #viralvideo pic.twitter.com/GrGI1UkPLX
— Viral News Vibes (@viralnewsvibes) April 2, 2025