ಕಣ್ಣಿಗೊಂದು ಸವಾಲ್‌: ‘O’ ಅಕ್ಷರಗಳ ಮಧ್ಯೆ ಇರುವ ಸಂಖ್ಯೆ ಯಾವುದು ಪತ್ತೆ ಹಚ್ಚಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಜನಪ್ರಿಯವಾಗಿರುವ ಚಟುವಟಿಕೆ. ನಿಮ್ಮ ಮೊಬೈಲ್‌ ನಲ್ಲೂ ಆಗಾಗ ಇಂತಹ ಸವಾಲು ಕಣ್ಣಿಗೆ ಬೀಳ್ತಾ ಇರುತ್ತೆ. ನಮ್ಮ ಕಣ್ಣುಗಳಿಗೆ ಭ್ರಮೆ ಹುಟ್ಟಿಸುವ, ನಂಬಲಾಗದಂತಹ ಫೋಟೋ ಮತ್ತು ವಿಡಿಯೋಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಂಡಿರುತ್ತಾರೆ.

ಬಹುಪಾಲು ಜನರು ಆಪ್ಟಿಕಲ್‌ ಭ್ರಮೆಗಳನ್ನು ಪತ್ತೆ ಹಚ್ಚಲು ವಿಫಲರಾಗುತ್ತಾರೆ. ಕೆಲವು ಸೆಕೆಂಡುಗಳ ಕಾಲ ಚಿತ್ರವನ್ನು ದಿಟ್ಟಿಸಿ ನೋಡಿದ ನಂತರವೇ ಜನರಿಗೆ ಅದು ಏನು ಅಂತಾ ಅರ್ಥವಾಗಿರುತ್ತದೆ. ಈಗ ಮತ್ತೆ ಅಂತಹದ್ದೇ ಚಿತ್ರವೊಂದು ವೈರಲ್ ಆಗಿದೆ.

ಮಿದುಳಿಗೆನೇ ಕೆಲಸ ಕೊಡೊ ಚಿತ್ರ ಇದಾಗಿದೆ. ನೋಡುವುದಕ್ಕೆ ಸಾಮಾನ್ಯವಾಗಿರುವ ಚಿತ್ರ ಅಂತ ನಿಮಗೆ ಅನಿಸಬಹುದು. ಆದರೆ ಈ ಚಿತ್ರದ ತುಂಬೆಲ್ಲ ಇಂಗ್ಲಿಷ್ ವರ್ಣಮಾಲೆಯ ಓ ಅಕ್ಷರಗಳ ಆಕಾರಗಳೇ ಹೆಚ್ಚಾಗಿ ಕಾಣಿಸುತ್ತೆ. ಅಸಲಿಗೆ ಇಲ್ಲೇ ಇದೆ ಸವಾಲು. ಇದೇ ಓ ಅಕ್ಷರಗಳ ರಾಶಿಯಲ್ಲಿ ಸೊನ್ನೆಯೊಂದು ಇದೆ. ಅದನ್ನ ಹುಡುಕಿ ತೆಗೆದರೆ ಗೆದ್ದ ಲೆಕ್ಕ.

ಕಣ್ಣು-ಮೆದುಳು ಒಂದೇ ಸಮನೆ ಇದರೊಳಗೆ ಅಡಗಿರುವ ಸಂಖ್ಯೆಯನ್ನ ಹುಡುಕುತ್ತೆ. ತಕ್ಷಣ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಮೆದುಳು ಕಣ್ಣು ಒಟೊಟ್ಟಿಗೆ ಕೆಲಸ ಮಾಡಿದಾಗಲೇ ಇಲ್ಲಿ ಅಡಗಿರುವ ಅಸಲಿ ಮ್ಯಾಜಿಕ್ ಸಂಖ್ಯೆ ಪತ್ತೆ ಹಚ್ಚುವುದಕ್ಕೆ ಸಾಧ್ಯ.

ಇದನ್ನ ಪತ್ತೆ ಹಚ್ಚುವುದಕ್ಕೆ ನಿಮ್ಮ ಬಳಿ ಇರೋದು ಕೇವಲ 7-10 ಸೆಕೆಂಡ್ ಅಷ್ಟೆ. ನೀವು ಈ ಆಟ ಒಮ್ಮೆ ಆಡಿ, ಆಗ ನೋಡಿ ನಿಮ್ಮ ಮೆದುಳು ಮತ್ತು ನಿಮ್ಮ ಕಣ್ಣು ಎಷ್ಟು ಚುರುಕಾಗಿರುತ್ತೆ ಅನ್ನೋದು ನಿಮಗೆನೇ ಗೊತ್ತಾಗಿ ಬಿಡುತ್ತೆ.

Optical Illusion We Challenge You To Find The Number Among The Letters In 7 Seconds

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read