ಬೆಂಗಳೂರು: ರಾಜ್ಯದಲ್ಲಿ 1 ಲಕ್ಷ ಕೋಟಿ ಮೌಲ್ಯದ ಗಣಿ ಹಗರಣ ನಡೆದಿದ್ದು, ಈ ಬಗ್ಗೆ ತನಿಖೆಗೆ ಎಸ್ ಐಟಿ ವಿಶೇಷ ತಂಡ ರಚನೆ ಮಾಡುವಂತೆ ಮಾಜಿ ಸಚಿವರು, ಸಂಸದರು, ಎಂ ಎಲ್ ಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
20 ಕ್ಕೂ ಹೆಚ್ಚು ನಾಯಕರು ಮುಖ್ಯಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ.ಪಾಟಿ, ಅವರಿಗೆ ಪತ್ರ ಬರೆದಿದ್ದು, ಎಸ್ ಐಟಿ ರಚನೆಗೆ ಒತ್ತಾಯಿಸಿದ್ದಾರೆ.
ಬಳ್ಳಾರಿ, ತುಮಕೂರು, ಚಿತ್ರದುರ್ಗ ಹಾಗೂ ಇನ್ನಿತರ ಕಡೆಗಳಲ್ಲಿ ಕಬ್ಬಿಣದ ಅದಿರು ಲಭ್ಯವಾಗುತ್ತಿರುವುದನ್ನು ಗಮನಿಸಿದ ಕೆಲ ಗಣಿ ಮಾಲೀಕರು 2000ದಿಂದ ಅಕ್ರಮವಾಗಿ ಗಣಿ ಲೂಟಿ ಮಾಡುತ್ತಿದ್ದರು. ಸತ್ಯ ಶೋಧನಾ ಸಮಿತಿ ವರದಿ, ನ್ಯಾಯಾಂಗ ತನಿಖೆಗೆ ಒತ್ತಾಯ ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆ ವರದಿಗಳಿಂದ ಸ್ಪಷ್ಟವಾಗುವುದೇನಂದರೆ ಕಬ್ಬಿಣದ ಅದಿರು ಸಂಪತ್ತನ್ನು ಕೆಲವರು ರಾಜಕಾರಣಿಗಳ, ಅಧಿಅಕರಿಗಳ ಸಹಕಾರದಿಂದ ಲೂಟಿ ಮಾಡಿದ್ದು, 1 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಲೂಟಿ ಮಾಡಲಾಗಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್.ಕೆ.ಪಾಟೀಲ್ ನೇತೃತ್ವದ ಉಪಸಮಿತಿ ನೀಡಿರುವ ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಈ ನಿಟ್ಟಿನಲ್ಲಿ ಎಸ್ ಐಟಿ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.