ಅಕ್ರಮವಾಗಿ ಕುದುರೆ ಗಾಡಿಗಳ ರೇಸ್ ಆಯೋಜನೆ ಕಾರಣದಿಂದಾಗಿ ಮುಂಬೈ – ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಗಲಿಬಿಲಿ ಸೃಷ್ಟಿಯಾಗಿತ್ತು. ತಲಾ ಎರಡು ಕುದುರೆಗಳಿಂದ ಎಳೆಯಲ್ಪಟ್ಟ ಆರು ಕುದುರೆ ಗಾಡಿಗಳನ್ನು ಹೆದ್ದಾರಿಯಲ್ಲಿ ರೇಸ್‌ಗೆ ಬಿಟ್ಟಿದ್ದ ವಿಡಿಯೋವನ್ನು ಹೆದ್ದಾರಿಯ ಸಂಚಾರಿಗಳು ರೆಕಾರ್ಡ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ವರ್ಸೋವಾ ಸೇತುವೆ ಬಳಿ ಈ ಘಟನೆ ಸಂಭವಿಸಿದ್ದು, ರೇಸ್‌ನ ಸ್ಪರ್ಧಿಗಳು ತಮ್ಮ ಗಾಡಿಗಳನ್ನು ಆದಷ್ಟು ವೇಗದಲ್ಲಿ ಓಡಿಸಲೆಂದು ಕುದುರೆಗಳಿಗೆ ಮನಸೋಯಿಚ್ಛೆ ಚಾಟಿಯೇಟು ಕೊಡುತ್ತಿರುವುದನ್ನು ನೋಡಬಹುದಾಗಿದೆ.
ಉದ್ದೇಶಪೂರಕವಾಗಿ ಪ್ರಾಣಿಹಿಂಸೆ ಮಾಡಿದ ಆರೋಪದ ಮೇಲೆ ಹತ್ತಿರದ ದಿಂಡೋಶೀ ಪೊಲೀಸ್ ಠಾಣೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಕುದುರೆ ಸವಾರಿಗೆ ಲೈಸೆನ್ಸ್ ಇಲ್ಲದೆಯೇ ಈ ರೇಸ್ ಆಯೋಜನೆ ಮಾಡಿದ ಆರೋಪದ ಮೇಲೆ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಸ್ತೆಯ ಎಲ್ಲಾ ಪಥಗಳನ್ನು ಕುದುರೆ ಸವಾರರೇ ಆಕ್ರಮಿಸಿಕೊಂಡಿದ್ದ ಕಾರಣ ಇತರೆ ವಾಹನಗಳಿಗೆ ಓಡಾಡಲು ಅನಾನುಕೂಲವಾಗಿತ್ತು. ರಸಾಲ್ ಜಸಿಂತೋ (40), ಲಾರಿ ಜಸಿಂತೋ (30), ಭಾಸ್ಕರ್ ವೈಶ್ (20) ಮತ್ತು ದಿಲೀಪ್ ದಕ್ವಾ (27) ಎಂಬ ನಾಲ್ವರ ವಿರುದ್ಧ ಐಪಿಸಿಯ 279, 289, 336 ಹಾಘೂ 34ನೇ ವಿಧಿ ಹಾಗೂ ಪ್ರಾಣಿಹಿಂಸೆ ವಿರೋಧಿ ಕಾಯಿದಯ 11(1) ವಿಧಿಯಡಿ ಇವರ ಮೇಲೆ ಎಫ್‌ಐಆರ್ ದಾಖಲಾಗಿದೆ.
https://twitter.com/hplivenews1/status/1670875171509665794?ref_src=twsrc%5Etfw%7Ctwcamp%5Etweetembed%7Ctwterm%5E1670875171509665794%7Ctwgr%5E46b783a4db3f69f9990c70d1f44381b0383e35f1%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fillegal-horse-cart-race-disrupts-mumbai-ahmedabad-highway-video-viral