BIG NEWS: ಪಿಎಸ್ ಐ ತನ್ವೀರ್ ಹುಸೇನ್ ಅಮಾನತು ಆದೇಶ ತೆರವು

ರಾಮನಗರ: ರಾಮನಗರದಲ್ಲಿ ಪೊಲೀಸರು ವರ್ಸಸ್ ವಕೀಲರ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ ಐ ತನ್ವೀರ್ ಹುಸೇನ್ ಅಮಾನತು ಆದೇಶ ತೆರವುಗೊಳಿಸಲಾಗಿದೆ.

40 ವಕೀಲರ ಮೇಲೆ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದ್ದರು. ಐಜೂರು ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಫೆಬ್ರವರಿ 21ರಂದು ಪಿಎಸ್ ಐ ತನ್ವೀರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಪಿಎಸ್ ಐ ತನ್ವೀರ್ ಅಮಾನತು ಆದೇಶ ತೆರವುಗೊಳಿಸಿದ್ದಾರೆ. ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರಲ್ಲಿ ಪಿಎಸ್ ಐ ತಪ್ಪಿಲ್ಲ ಎಂದು ಸಸ್ಪೆಮ್ಡ್ ಆದೇಶ ಹಿಂಪಡೆಯಲಾಗಿದೆ. ಈ ಹಿನ್ನೆಲೆಅಲ್ಲಿ ಐಜೂರು ಠಾಣೆಯಲ್ಲಿ ಪಿಎಸ್ ಐ ತನ್ವೀರ್ ಹುಸೇನ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read