21 ಲಕ್ಷ ಸಂಬಳ, 10 ದಿನಕ್ಕೆ ರಾಜೀನಾಮೆ: ಐಐಎಂ ಪದವೀಧರನ ನಿರ್ಧಾರಕ್ಕೆ ನೆಟ್ಟಿಗರು ಶಾಕ್ !

ಐಐಎಂನಲ್ಲಿ ಓದಿರೋ ಒಬ್ಬ ಹುಡುಗ 21 ಲಕ್ಷ ಸಂಬಳದ ಕೆಲಸಕ್ಕೆ ಹತ್ತು ದಿನದಲ್ಲಿ ರಿಸೈನ್ ಮಾಡಿದ್ದಾನೆ. ಯಾಕಪ್ಪಾ ಅಂದ್ರೆ, ಅವನಿಗೆ ಮಾರ್ಕೆಟಿಂಗ್ ಕೆಲಸ ಅಂತ ಹೇಳಿ ಸೇರಿಸಿಕೊಂಡಿದ್ದರು, ಆದ್ರೆ ಮಾಡೋಕೆ ಹೇಳಿದ್ದು ಮಾತ್ರ ಸೇಲ್ಸ್ ಕೆಲಸ.

ರೆಡ್ಡಿಟ್ ಅನ್ನೋ ಆ್ಯಪ್‌ನಲ್ಲಿ ಒಬ್ಬರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಐಐಎಂನಿಂದ ಬಂದ ಹುಡುಗನಿಗೆ 21 ಲಕ್ಷ ಸಂಬಳ, ಜೊತೆಗೆ 2 ಲಕ್ಷ ಬೋನಸ್ ಕೂಡ ಇತ್ತು. ಆದ್ರೆ, ಸೇಲ್ಸ್ ಕೆಲಸ ಮಾಡೋಕೆ ಹೇಳಿದ ತಕ್ಷಣ, “ಇಲ್ಲಪ್ಪಾ, ಇದು ನಂಗೆ ಆಗಲ್ಲ” ಅಂತ ಹೊರಟುಹೋದ.

ಗುರುಗ್ರಾಮ್‌ನಲ್ಲಿ ಡೀಲರ್‌ಗಳನ್ನು ಮೀಟ್ ಮಾಡಿದ ಮೇಲೆ, ಆ ಹುಡುಗನಿಗೆ ಇದು ಮಾರ್ಕೆಟಿಂಗ್ ಕೆಲಸ ಅಲ್ಲ, ಸೇಲ್ಸ್ ಕೆಲಸ ಅಂತ ಗೊತ್ತಾಗಿದೆ. “ನಂಗೆ ಮಾರ್ಕೆಟಿಂಗ್ ಕೆಲಸ ಅಂತ ಹೇಳಿದ್ರು, ಆದ್ರೆ ಸೇಲ್ಸ್ ಮಾಡೋಕೆ ಹೇಳ್ತಿದ್ದಾರೆ” ಅಂತ ಹೇಳಿ ರಿಸೈನ್ ಮಾಡಿದ್ದಾನೆ.

ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನ ಏನೇನೋ ಮಾತಾಡ್ತಿದ್ದಾರೆ. ಕೆಲವರು, “ಅವನನ್ನ ದೂಷಿಸೋಕೆ ಆಗಲ್ಲ. ಮಾರ್ಕೆಟಿಂಗ್ ಅಂತ ಹೇಳಿ ಸೇಲ್ಸ್ ಕೆಲಸ ಮಾಡಿಸೋದು ಸಾಮಾನ್ಯ” ಅಂತಿದ್ದಾರೆ. ಇನ್ನು ಕೆಲವರು, “ಮಾರ್ಕೆಟಿಂಗ್ ಮಾಡೋರಿಗೆ ಸೇಲ್ಸ್ ಅನುಭವ ಇರಬೇಕು. ಇಲ್ಲಾಂದ್ರೆ ಏನು ಉಪಯೋಗ” ಅಂತಿದ್ದಾರೆ.

ಇನ್ನೊಬ್ಬರು, “ಸೇಲ್ಸ್ ಅಂದ್ರೆ ಸುಮ್ನೆ ಅಲ್ಲ. ಅದು ಗಟ್ಟಿಗರಿಗೆ ಮಾತ್ರ. ಐಐಎಂ ಟ್ಯಾಗ್ ಇದ್ರೆ, ಸಂಬಳ ಜಾಸ್ತಿ ಸಿಗುತ್ತೆ, ಆದ್ರೆ, ಕೆಲಸ ಮಾತ್ರ ದೊಡ್ಡದು ಇರಬೇಕು ಅಂತ ಏನಿಲ್ಲ” ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ, ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಕೆಲವರು ಐಐಎಂ ಹುಡುಗನನ್ನ ಸಪೋರ್ಟ್ ಮಾಡಿದ್ರೆ, ಇನ್ನು ಕೆಲವರು ಕೆಲಸ ಮಾಡೋಕೆ ಇಷ್ಟ ಇಲ್ಲದೆ ಹೊರಟುಹೋದ ಅಂತ ಹೇಳ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read