ನೀವು ಯಾವುದೇ ಕೇಸ್ ಗೆಲ್ಲಬೇಕೆಂದರೆ ಈ ವಾಸ್ತು ಸಲಹೆಯನ್ನು ಪಾಲಿಸಿ

ಹೆಚ್ಚಿನ ಜನರು ಕೋರ್ಟ್ ಕೇಸ್ ಗಳಿಂದ ದೂರವಿರಲು ಬಯಸುತ್ತಾರೆ. ಆದರೆ ಕೆಲವರು ಕೋರ್ಟ್ ಕೇಸ್ ಗಳಲ್ಲಿ ಸಿಲುಕಿರುತ್ತಾರೆ. ಹಾಗಾಗಿ ನಿಮ್ಮಮೇಲೆ ಯಾವುದೇ ಪ್ರಕರಣ ನಡೆಯುತ್ತಿದ್ದರೂ ಆ ಕೇಸ್ ನಲ್ಲಿ ನೀವು ಜಯ ಗಳಿಸಲು ಈ ವಾಸ್ತು ಸಲಹೆ ಪಾಲಿಸಿ.

ನಿಮ್ಮ ಕೋರ್ಟ್ ಕೇಸ್ ಗೆ ಸಂಬಂಧಿಸಿದ ಫೈಲ್ ಗಳನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ಪ್ರಕರಣ ದೀರ್ಘಕಾಲದವರೆಗೆ ನಡೆಯುತ್ತಿರುತ್ತದೆ. ನಿಮಗೆ ಕೋರ್ಟ್ ಮೆಟ್ಟಿಲು ಏರಿ ಸಾಕಾಗಬಹುದು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಫೈಲ್ ಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಿ. ಎಲ್ಲಾ ಫೈಲ್ ಗಳ ಮೇಲೆ ಕೇಸರಿಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಇದರಿಂದ ನೀವು ಆ ಕೇಸ್ ನಲ್ಲಿ ದೇವರ ಕೃಪೆಯಿಂದ ಜಯ ಗಳಿಸಬಹುದು.

ಹಾಗೇ ಪ್ರಕರಣದಲ್ಲಿ ಜಯ ಗಳಿಸಲು ಮಂಗಳವಾರ ಹನುಮಂತನ ದೇವಾಲಯಕ್ಕೆ ತೆರಳಿ ಕಡಲೆ ಮತ್ತು ಬೆಲ್ಲವನ್ನು ಅರ್ಪಿಸಿ. ಇದರಿಂದ ಹನುಮಂತನ ಅನುಗ್ರಹ ದೊರೆತು ಕೇಸ್ ನಲ್ಲಿ ಜಯ ಸಿಗುತ್ತದೆ.

ಹಾಗೇ ನ್ಯಾಯಾಲಯದ ಪ್ರಕರಣದ ವಿಚಾರಣೆಗೆ ಕೋರ್ಟ್ ಗೆ ಹೋಗುವಾಗ ಗಾಢ ವರ್ಣದ ಬಟ್ಟೆಯನ್ನು ಧರಿಸಬೇಡಿ. ಹಾಗೇ ಕೋರ್ಟ್ ಗೆ ಹೋಗುವ ಮುನ್ನ ಭೈರವನ ದೇವಾಲಯದಲ್ಲಿ ದೀಪವನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿ.ಇದರಿಂದ ನಿಮಗೆ ಜಯ ಸಿಗುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read