ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಪ್ರತಿದಿನ 10 ನಿಮಿಷ ಮಾಡಿ ಈ ಕೆಲಸ..…!

ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಬಹಳಷ್ಟು ಜನರನ್ನು ಕಾಡುತ್ತಿದೆ. ಅನೇಕರು ರಾತ್ರಿಯೆಲ್ಲಾ ನಿದ್ದೆ ಬಾರದೇ ಒದ್ದಾಡುತ್ತಾರೆ. ಸರಿಯಾಗಿ ನಿದ್ರಿಸದೇ ಇದ್ದಾಗ ಆಯಾಸ ಉಂಟಾಗುತ್ತದೆ.

ನಿದ್ರಾಹೀನತೆಯಿಂದ ಬಳಲುತ್ತಿರುವವರು ಸುಲಭದ ಮಸಾಜ್‌ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಮಲಗುವ ಮೊದಲು ಪಾದಗಳ ಅಡಿಭಾಗವನ್ನು ಚೆನ್ನಾಗಿ ಮಸಾಜ್ ಮಾಡಬೇಕು. ಪಾದಗಳ ಮಸಾಜ್‌ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಪಾದಗಳ ಮಸಾಜ್‌ನಿಂದ ಇನ್ನೂ ಹಲವು ರೀತಿಯ ಪ್ರಯೋಜನಗಳಿವೆ.

ದಿನವಿಡೀ ಕೆಲಸ ಅಥವಾ ಪ್ರಯಾಣ ಮಾಡುವುದರಿಂದ ಕಾಲುಗಳಲ್ಲಿ ಬಿಗಿತ ಉಂಟಾಗುತ್ತದೆ. ಈ ರೀತಿ ಮಸಾಜ್‌ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ದೇಹಕ್ಕೆ ವಿಶ್ರಾಂತಿ ಸಿಗುವುದರಿಂದ ಆಳವಾದ ನಿದ್ರೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಪಾದಗಳಲ್ಲಿ ಆಕ್ಯುಪ್ರೆಶರ್ ಪಾಯಿಂಟ್‌ಗಳಿವೆ, ಅವುಗಳಿಗೆ ಮಸಾಜ್‌ ಮಾಡುವ ಮೂಲಕ ಇಡೀ ದೇಹದ ನೋವನ್ನು ಕಡಿಮೆ ಮಾಡಬಹುದು. ಮೈಕೈ ನೋವಿನಿಂದ ನಿದ್ರೆ ಮಾಡಲು ಕಷ್ಟವಾಗುತ್ತಿದ್ದರೆ ಪಾದಗಳ ಮಸಾಜ್ ತುಂಬಾ ಪ್ರಯೋಜನಕಾರಿ. ಮಸಾಜ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ದೇಹವನ್ನು ರಿಲ್ಯಾಕ್ಸ್‌ ಮಾಡಲು ಉತ್ತಮ ಮಾರ್ಗವೆಂದರೆ ಮಸಾಜ್. ಇಡೀ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಪಾದಗಳಿಗೆ ಮಸಾಜ್ ಮಾಡುವುದರಿಂದ ಪ್ರಯೋಜನ ಪಡೆಯಬಹುದು. ಇದು ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಹೆಚ್ಚಿನ ಮಹಿಳೆಯರು ಪ್ರೀ ಮೆನ್ಸ್‌ಟ್ರುವಲ್‌ ಸಿಂಡ್ರೋಮ್‌ನಿಂದ ಬಳಲುತ್ತಾರೆ. ಇದರಿಂದ ಉಂಟಾಗುವ ನೋವು ಮತ್ತು ಅಸ್ವಸ್ಥತೆಯಿಂದಾಗಿ ಅನೇಕ ಬಾರಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಈ ಮಸಾಜ್‌ ಮೂಲಕ ಪಿಎಂಎಸ್‌ ನೋವನ್ನು ಕಡಿಮೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read