ಕಾರ್ತಿಕ ಮಾಸದ ಹುಣ್ಣಿಮೆ ದಿನ ಈ ಪೂಜೆ ಮಾಡಿದರೆ ಶಿವನ ಜೊತೆಗೆ ದೊರೆಯುತ್ತೆ ಲಕ್ಷ್ಮಿ ಅನುಗ್ರಹ

ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುತ್ತಾರೆ. ಆದರೆ ಶಿವನ ಜೊತೆಗೆ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಕಾರ್ತಿಕ ಮಾಸದ ಈ ದಿನದಂದು ಲಕ್ಷ್ಮಿ ಪೂಜೆ ಮಾಡಬೇಕು. ಇದರಿಂದ ಸಕಲ ಯೋಗ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಸರ್ವ ಜಯಂಕರೀ ದೀಪಲಕ್ಷ್ಮಿ ಪೂಜೆ ಮಾಡಿ. ಆ ವೇಳೆ ಶಿವನ ಫೋಟೊ ಇಟ್ಟು ಶಿವನಿಗೆ ಪ್ರಿಯವಾದ ಹೂ, ಪತ್ರೆಯನ್ನು ಅರ್ಪಿಸಿ, ಲಕ್ಷ್ಮಿಯ ಸ್ವರೂಪವಾದ ದೀಪವನ್ನು ಹಚ್ಚಬೇಕು. ಈ ದೀಪಕ್ಕೆ ಕಮಲದ ನಾರಿನಿಂದ ತೆಗೆದ ಬತ್ತಿಯಿಂದ ತುಪ್ಪ ಹಾಕಿ ದೀಪಾರಾಧನೆ ಮಾಡಬೇಕು.

ಹಾಗೇ ಪೂಜೆಯ ವೇಳೆ “ಓಂ ನಮಃ ಶಿವಾಯ ಶುಭಂ ಶುಭಂ, ಕುರುಕುರು ಶನಮ ಶಿವಾಯ ಓಂ ನಮಃ” ಈ ಮಂತ್ರವನ್ನು 11 ಬಾರಿ ಹೇಳಬೇಕು. ಬಳಿಕ ಪಚ್ಚೆ ಕರ್ಪೂರದ ಆರತಿ ಬೆಳಗಿ, ಕಲ್ಲುಸಕ್ಕರೆ, ಬಾಳೆಹಣ್ಣನ್ನು ನೈವೇದ್ಯವಾಗಿ ಇಡಬೇಕು. ಹೀಗೆ ಮಾಡಿದರೆ ಶಿವ ಮತ್ತು ಲಕ್ಷ್ಮಿ ಇಬ್ಬರ ಅನುಗ್ರಹದಿಂದ ನಿಮಗೆ ಪುಣ್ಯ, ಅಷ್ಟ ಐಶ್ವರ್ಯ ದೊರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read