ಹಾಲಿನ ಜೊತೆ ಬೆಲ್ಲ ಬೆರೆಸಿ ಕುಡಿದರೆ ಸಿಗುತ್ತೆ ಈ ಎಲ್ಲ ಆರೋಗ್ಯ ಲಾಭ

ಬೆಳಗ್ಗೆ ಬಿಸಿ ಬಿಸಿ ಕಾಫಿ, ಹಾಲು ಅಥವಾ ಚಹಾ ಕುಡಿಯುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಇವುಗಳಿಗೆ ಸಕ್ಕರೆ ಬೆರೆಸಿ ಕುಡಿಯುವುದಕ್ಕಿಂತ ಬೆಲ್ಲ ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಯಾಕೆಂದರೆ ಸಕ್ಕರೆಯಲ್ಲಿ ಕೊಬ್ಬಿನ ಅಂಶ ಅತಿ ಹೆಚ್ಚು. ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸಂಸ್ಕರಿಸಿದ ಸಕ್ಕರೆಗಿಂತ ಬೆಲ್ಲವೆ ಉತ್ತಮ.

ಇನ್ನು ಪ್ರತಿ ದಿನ ಬೆಳಗ್ಗೆ ಕುಡಿಯುವ ಹಾಲಿನಲ್ಲಿ ಸಕ್ಕರೆ ಬದಲಿಗೆ ಬೆಲ್ಲವನ್ನು ಮಿಶ್ರ ಮಾಡಿ ಕುಡಿಯುವುದರಿಂದ ಈ ಎಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದು.

ತಲೆ ಕೂದಲ ಸಮಸ್ಯೆ ಇದ್ದವರು ಬೆಳಗ್ಗೆ ಬಿಸಿ ಹಾಲಿನೊಂದಿಗೆ ಸಕ್ಕರೆ ಬದಲು ಬೆಲ್ಲವನ್ನು ಮಿಶ್ರ ಮಾಡಿ ಕುಡಿಯುವುದರಿಂದ ಕೂದಲಿಗೆ ಬೇಕಾದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ತಲೆ ಕೂದಲು ಹೊಳಪಾಗುತ್ತದೆ. ತಲೆ ಕೂದಲು ಉದುರುವುದು ನಿಂತು ತಲೆ ಹೊಟ್ಟು ಸಮಸ್ಯೆ ಸಹ ನಿವಾರಣೆಯಾಗುತ್ತದೆ.

ಕೀಲು ನೋವಿದ್ದವರಿಗೆ, ಋತು ಸಮಸ್ಯೆ ಇದ್ದವರಿಗೆ ಇದರ ಸೇವನೆ ಒಳ್ಳೆಯದು. ನಿಶ್ಶಕ್ತಿಯಿಂದ ಬಳಲುವವರಿಗೆ ಉಪಕಾರಿ. ಮಲಬದ್ಧತೆ ನಿವಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶ್ವಾಸನಾಳ ಶುದ್ಧಗೊಳಿಸುತ್ತದೆ. ಪಿತ್ತಕೋಶದ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ. ಆ್ಯಸಿಡಿಟಿಗೆ ಒಳ್ಳೆಯದು.

ಅಷ್ಟೇ ಅಲ್ಲ, ರಕ್ತಹೀನತೆ ಸಮಸ್ಯೆ ನಿವಾರಿಸುತ್ತದೆ. ಜೊತೆಗೆ ರಕ್ತ ಶುದ್ಧಗೊಳಿಸುತ್ತದೆ. ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ. ಆದ್ದರಿಂದ ಇದು ಆತಂಕ, ಒತ್ತಡ ಹಾಗೂ ಋತುಸ್ರಾವದ ಮುನ್ನದ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read