ಬಹಳ ಸಮಯದಿಂದ ಹೊಟ್ಟೆ ನೋವು ಕಾಡುತ್ತಿದ್ದರೆ ನಿರ್ಲಕ್ಷ ಬೇಡ, ಇದು ಗಂಭೀರ ಕಾಯಿಲೆಯ ಸಂಕೇತವಿರಬಹುದು…!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸೇರಿದಂತೆ ಹೊಟ್ಟೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಬಹಳಷ್ಟು ಜನರನ್ನು ಕಾಡಲಾರಂಭಿಸಿವೆ. ಇದಕ್ಕೆ ಮೂಲ ಕಾರಣ ನಮ್ಮ ತಪ್ಪು ಆಹಾರ ಪದ್ಧತಿ. ದೀರ್ಘಕಾಲದವರೆಗೆ ಹೊಟ್ಟೆಯ ಸಮಸ್ಯೆಗಳನ್ನು ಹೊಂದಿದ್ದರೆ ಅಪಾಯಕಾರಿ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಈಗ ಸರ್ವೇಸಾಮಾನ್ಯವಾಗಿದೆ. ಪದೇ ಪದೇ ಹೊಟ್ಟೆ ಅಪ್ಸೆಟ್‌ ಆಗುತ್ತಿದ್ದರೆ ಅದು ನಮ್ಮ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಳದಿಂದ ಕೂಡ ಹೊಟ್ಟೆಯ ತೊಂದರೆ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಕೊಲೆಸ್ಟ್ರಾಲ್ ಹೆಚ್ಚಾದಾಗ ಪಿತ್ತಜನಕಾಂಗದಿಂದ ಬಿಡುಗಡೆಯಾಗುವ ರಸವು ದೇಹದಲ್ಲಿನ ಪಿತ್ತರಸವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳು ಸಹ ಬೆಳೆಯಬಹುದು.

ಕೊಲೆಸ್ಟ್ರಾಲ್ ಹೆಚ್ಚಾದಾಗ ಹೊಟ್ಟೆಯಲ್ಲಿ ಊತ ಬರುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಸೆಳೆತ ಕಾಡಬಹುದು. ಪದೇ ಪದೇ ಹೊಟ್ಟೆನೋವು ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಹೊಟ್ಟೆಯ ತೊಂದರೆಯಿಂದಾಗಿ ದೌರ್ಬಲ್ಯ ಕೂಡ ಉಂಟಾಗಬಹುದು. ಏಕೆಂದರೆ ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.

ನಿರಂತರ ಹೊಟ್ಟೆಯ ತೊಂದರೆಯಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಡಿಹೈಡ್ರೇಶನ್‌ನಿಂದ ಅನೇಕ ರೀತಿಯ ಸಮಸ್ಯೆಗಳಾಗುತ್ತವೆ. ಹಾಗಾಗಿ ಉದರ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read